ಮುಂಬೈ: ಫ್ಯಾಶನ್ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್ ನಟ ರಣವೀರ್ ಸಿಂಗ್, ಈ ಬಾರಿ ದುಬಾರಿ ಮನೆ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮುಂಬೈನ ಪ್ರಸಿದ್ಧ ಬಾಂದ್ರಾ ಪ್ರದೇಶದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ಮಹಡಿಗಳ ಐಷಾರಾಮಿ ಬಂಗಲೆಯನ್ನು ರಣವೀರ್ ಸಿಂಗ್ ಖರೀದಿಸಿದ್ದು, ಅದರ ಬೆಲೆ ₹119 ಕೋಟಿ ಆಗಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಮನೆಯ ಸಮೀಪದಲ್ಲೇ ರಣವೀರ್ ಸಿಂಗ್ ಮನೆಯಿದ್ದು, ಅದು ಅಪಾರ್ಟ್‌ಮೆಂಟ್‌ನ 16, 17, 18 ಮತ್ತು 19ನೇ ಮಹಡಿಯಲ್ಲಿ ಹರಡಿಕೊಂಡಿದೆ.
ರಣವೀರ್ ಸಿಂಗ್ ಮತ್ತು ಅವರ ಪತ್ನಿ ದೀಪಿಕಾ ಪಡುಕೋಣೆ ಕಳೆದ ವರ್ಷ ಅಲಿಭಾಗ್‌ನಲ್ಲಿ ಬಂಗಲೆಯೊಂದನ್ನು ₹22 ಕೋಟಿ ಬೆಲೆ ತೆತ್ತು ಖರೀದಿಸಿದ್ದರು.