ಭಾನುವಾರ, ಮೇ 22, 2022
24 °C

ಗ್ರ್ಯಾಮಿ ಸಂಗೀತ ಪ್ರಶಸ್ತಿ ಸಮಾರಂಭ: ಲತಾ ಮಂಗೇಶ್ಕರ್ ಸ್ಮರಣೆ ಕೈಬಿಟ್ಟ ಆಯೋಜಕರು

ಪಿಟಿಐ Updated:

ಅಕ್ಷರ ಗಾತ್ರ : | |

dh file

ಮುಂಬೈ: ದೇಶದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರನ್ನು ಗ್ರ್ಯಾಮಿ ಸಂಗೀತ ಪ್ರಶಸ್ತಿ ಸಮಾರಂಭದ ಸ್ಮರಣೀಯ ವಿಭಾಗದಲ್ಲಿ ಉಲ್ಲೇಖಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಲತಾ ಮಂಗೇಶ್ಕರ್ ಹೆಸರನ್ನು ಕೈಬಿಟ್ಟಿರುವುದಕ್ಕೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಸ್ ವೆಗಾಸ್‌ನಲ್ಲಿ ಆಯೋಜಿಸಲಾಗಿದ್ದ 2022 ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ, ಈ ವರ್ಷ ನಿಧನರಾದ ಖ್ಯಾತ ಗಾಯಕರು, ಸಂಗೀತ ಸಂಯೋಜಕರು ಮತ್ತು ನಿರ್ದೇಶಕರನ್ನು ಸ್ಮರಿಸಲಾಗುತ್ತದೆ. ಆದರೆ, ಆ ಪಟ್ಟಿಯಲ್ಲಿ ಲತಾ ಮಂಗೇಶ್ಕರ್ ಹೆಸರು ಇರಲಿಲ್ಲ.

ಲತಾ (92) ಅವರು ಜನವರಿ 6ರಂದು, ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿ ನಿಧನರಾಗಿದ್ದರು.

ಕಳೆದ ತಿಂಗಳು ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ‘ಸ್ಮರಣೀಯ‘ ವಿಭಾಗದಲ್ಲಿ ಲತಾ ಅವರ ಹೆಸರನ್ನು ಕೈಬಿಡಲಾಗಿತ್ತು.

ಈ ಬಾರಿ ಗ್ರ್ಯಾಮಿ ಸಮಾರಂಭದಲ್ಲೂ ಲತಾ ಹೆಸರು ಕೈಬಿಟ್ಟಿರುವುದು ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಟ್ವಿಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು