ಸೋಮವಾರ, ಜುಲೈ 4, 2022
21 °C

ಗೆಳೆಯ ಅಸ್ಲಾನ್ ಜತೆ ಕ್ರಿಸ್‌ಮಸ್‌ ಆಚರಿಸಿದ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Mushtaq Shiekh iNstagram post

ಬೆಂಗಳೂರು: ಬಾಲಿವುಡ್ ನಟ ಹೃತಿಕ್ ರೋಷನ್ ಅವರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಸುಸಾನೆ ಖಾನ್, ಗೆಳೆಯ ಅಸ್ಲಾನ್ ಗೋನಿ ಜತೆಗಿನ ಒಡನಾಟದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ.

ಈ ಬಾರಿ ಇಬ್ಬರೂ ಜತೆಯಾಗಿ ಕ್ರಿಸ್‌ಮಸ್ ಹಬ್ಬ ಆಚರಿಸಿರುವ ಫೋಟೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಅಸ್ಲಾನ್ ಜತೆ ಸುಸಾನೆ ಖಾನ್ ಇರುವ ಫೋಟೊವನ್ನು ಚಿತ್ರಕಥೆಗಾರ ಮುಶ್ತಾಕ್ ಶೇಖ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಗೋವಾದಲ್ಲಿ ಸುಸಾನೆ ಖಾನ್ ಹುಟ್ಟುಹಬ್ಬವನ್ನು ಅಸ್ಲಾನ್ ಗೋನಿ ಆಚರಿಸಿದ್ದು ಮತ್ತು ಅಸ್ಲಾನ್ ಗೋನಿ ಹುಟ್ಟುಹಬ್ಬದ ಆಚರಣೆಯಲ್ಲಿ ಸುಸಾನೆ ಖಾನ್ ಪಾಲ್ಗೊಂಡ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.

ಅಲ್ಲದೆ ಇಬ್ಬರೂ ಪರಸ್ಪರ ಅತ್ಯಂತ ಆಪ್ತವಾಗಿ ಶುಭಕೋರಿದ್ದರು.

ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆಯೇ, 'ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಅಷ್ಟೇ' ಎಂದು ಹೇಳಿಕೆ ನೀಡುತ್ತಾ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು