ಭಾನುವಾರ, ಜನವರಿ 19, 2020
20 °C

‘ನಾನು ರಾನು ಮಂಡಲ್ ಮ್ಯಾನೇಜರ್‌ ಅಲ್ಲ...’ರೇಗಿದ ರೇಷಮಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತಾದ ರೈಲ್ವೆ ಪ್ಲಾಟ್‌ಫಾರಂನಿಂದ ನೇರವಾಗಿ ಬಾಲಿವುಡ್‌ ಪ್ರವೇಶಿಸಿದ ಇಂಟರ್‌ನೆಟ್‌ ಸೆನ್ಶೆಷನ್‌ ರಾನು ಮಂಡಲ್‌ ಅವರನ್ನು ವಿವಾದಗಳು ಬೆನ್ನು ಹತ್ತುತ್ತಿವೆ. ಮೇಕಪ್‌ ಕುರಿತ ನಕಲಿ ಚಿತ್ರ, ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿ ಮೇಲೆ ರೇಗಾಡಿದ್ದು ದೊಡ್ಡ ಸುದ್ದಿಯಾಯಿತು.

ರಾನು ಮಂಡಲ್‌ ವಿವಾದಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ತಾಳ್ಮೆ ಕಳೆದುಕೊಂಡ ನಟ, ಗಾಯಕ ಹಿಮೇಶ್‌ ರೇಷಮಿಯಾ ಈಚೆಗೆ ಪತ್ರಕರ್ತರ ಮೇಲೆ ರೇಗಾಡಿದ ಘಟನೆ ನಡೆದಿದೆ.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯಿಂದ ಕಸಿವಿಸಿಗೊಂಡ ರೇಷಮಿಯಾ, ‘ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ನಾನು ರಾನು ಮಂಡಲ್‌ ಅವರ ಮ್ಯಾನೇಜರ್‌ ಅಲ್ಲ. ಅವರಿಗೆ ಸಂಬಂಧಿಸಿದ ವಿಷಯಗಳಿಗೆ ನಾನು ಏಕೆ ಸಮಜಾಯಿಷಿ ನೀಡಲಿ?’ ಎಂದು ಖಾರವಾಗಿ ಮರು ಪ್ರಶ್ನಿಸಿದ್ದಾರೆ.

‘ನಾನು ರಾನು ಅವರೊಬ್ಬರಿಗೆ ಮಾತ್ರವಲ್ಲ, ಅನೇಕರಿಗೆ ಬಾಲಿವುಡ್‌ನಲ್ಲಿ ಅವಕಾಶ ನೀಡಿದ್ದೇನೆ. ಅವರಿಗೆಲ್ಲ ಸಂಬಂಧಿಸಿದ ವಿಷಯಗಳಿಗೆ ನಾನು ಉತ್ತರ ನೀಡುತ್ತ ಕೂಡಬೇಕೆ? ನನಗೇನೂ ಬೇರೆ ಕೆಲಸವಿಲ್ಲವೇ...’ ಎಂದು ಹರಿಹಾಯ್ದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು