ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಡ್ರೆಲ್ಲಾ ಅವತಾರದಲ್ಲಿ ಕಂಗೊಳಿಸಿದ ಕೃತಿ ಸನೊನ್

Last Updated 14 ಮಾರ್ಚ್ 2022, 10:13 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟಿ ಕೃತಿ ಸನೊನ್ ಅವರು ಅಕ್ಷಯ್ ಕುಮಾರ್ ಹೊಸ ಚಿತ್ರ ‘ಬಚ್ಚನ್ ಪಾಂಡೆ‘ ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಮಧ್ಯೆ ಅವರು, ಸಿಂಡ್ರೆಲ್ಲಾ ಅವತಾರದಲ್ಲಿ ಹೊಸದಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೃತಿ ಹೊಸ ಫೋಟೊಗಳನ್ನು ನೋಡಿರುವ ಅಭಿಮಾನಿಗಳು ಲೈಕ್ ಮತ್ತು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿಂಡ್ರೆಲ್ಲಾ ಉಡುಪು ಧರಿಸಿದ ಬಳಿಕ ಸುಸ್ತಾಗಿ ಕೆಳಗಡೆ ಕುಳಿತುಕೊಂಡಿದ್ದೆ. ಆದರೆ ಅದುವೇ ಒಂದು ಫೋಟೊ ಪೋಸ್ ಆಗಿದೆ ಎಂದು ಕೃತಿ ಪೋಸ್ಟ್ ಮಾಡಿದ್ದಾರೆ.

ತೆಲುಗು ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಕೃತಿ, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT