ಮಂಗಳವಾರ, ಜನವರಿ 18, 2022
23 °C

ಮಗಳ ಹಣೆಗೆ ಮುತ್ತಿಟ್ಟ ಶಾಹೀದ್‌ ಕಪೂರ್‌ ಪತ್ನಿ: ನೆಟ್ಟಿಗರ ಮನಗೆದ್ದ ಮೀರಾ ಫೋಟೊ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Instagram@mira.kapoor

ನವದೆಹಲಿ: ನಟ ಶಾಹಿದ್‌ ಕಪೂರ್‌ ಅವರ ಪತ್ನಿ ಮೀರಾ ರಜಪೂತ್‌ ಕಪೂರ್‌ ಅವರು ಮಗಳು ಮಿಶಾ ಕಪೂರ್‌ ಹಣೆಗೆ ಮುತ್ತಿಡುತ್ತಿರುವ ಫೋಟೊ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಮನ ಗೆದ್ದಿದೆ.

ಮಿಶಾಳ ಹೇರ್‌ಪಿನ್‌ನಲ್ಲಿ 'ಲವ್' ಎಂಬ ಪದವು ಫೋಟೊದ ಅಪೇಕ್ಷೆಯನ್ನು ಮನಮುಟ್ಟುವಂತೆ ಹೇಳುವಂತಿದೆ.

ಬುಧವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಿಶಾಳ ಜೊತೆಗಿನ ಫೋಟೊವನ್ನು ಮೀರಾ ರಜಪೂತ್‌ ಹಂಚಿಕೊಂಡಿದ್ದಾರೆ. ಅಮ್ಮ-ಮಗಳ ಪ್ರೀತಿಯ ಫೋಟೊಗೆ ನೆಟ್ಟಿಗರು ಹೃದಯದ ಎಮೋಜಿಗಳ ಮಳೆಯನ್ನೇ ಹರಿಸಿದ್ದಾರೆ.

ಹೃದಯ ಎಮೋಜಿ ಜೊತೆಗೆ 'ಐ ಲವ್‌ ಯು' ಎಂದು ಫೋಟೊಗೆ ತಲೆಬರಹ ನೀಡಿರುವ ಮೀರಾ ರಜಪೂತ್‌ ಕಪೂರ್‌ ಮಾತೃಹೃದಯದ ಪ್ರತೀಕದಂತೆ ಕಾಣಿಸಿಕೊಂಡಿದ್ದಾರೆ. ನಟ ಶಾಹಿದ್‌ ಕಪೂರ್‌ ಅವರನ್ನು 2015ರಲ್ಲಿ ವಿವಾಹವಾಗಿರುವ ಮೀರಾ ರಜಪೂತ್‌ ಜೋಡಿಗೆ ಇಬ್ಬರು ಮಕ್ಕಳು, ಮಗ ಜೈನ್‌ ಕಪೂರ್‌ ಮತ್ತು ಮಗಳು ಮಿಶಾ ಕಪೂರ್‌ ಇದ್ದಾರೆ.

ಇತ್ತೀಚೆಗೆ ಮಾಲ್ಡಿವ್ಸ್‌ಗೆ ಪ್ರವಾಸ ತೆರಳಿದ್ದ ಮೀರಾ ಕುಟುಂಬ ಸಾಕಷ್ಟು ಫೋಟೊ ಮತ್ತು ವಿಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು