ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಚವನ್ನೇ ಮದುವೆಯಾಗಿ: ಶಾಹಿದ್‌ಗೆ ಟಾಂಗ್ ನೀಡಿದ ಮೀರಾ ರಜಪೂತ್

Last Updated 25 ಮಾರ್ಚ್ 2022, 9:11 IST
ಅಕ್ಷರ ಗಾತ್ರ

ಬೆಂಗಳೂರು: ಮಂಚವನ್ನೇ ಮದುವೆಯಾಗಿ.. ಹೀಗೆಂದು ಮೀರಾ ರಜಪೂತ್ ಅವರು ಗಂಡ ಶಾಹಿದ್ ಕಪೂರ್‌ಗೆ ಹೇಳಿದ್ದಾರೆ.

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರಿಬ್ಬರೂ ಸಾಮಾಜಿಕ ತಾಣಗಳಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಟ್ರೋಲ್ ಮಾಡುವುದು, ತಮಾಷೆಗೆ ವಿವಿಧ ಪೋಸ್ಟ್ ಹಾಕುವುದು ಹೊಸದೇನಲ್ಲ. ಆದರೆ ಈ ಬಾರಿ ಮಾತ್ರ ಮೀರಾ, ಶಾಹಿದ್ ಅವರು ಮಂಚವನ್ನು ಮದುವೆಯಾಗಲಿ ಎಂದು ಸಲಹೆ ನೀಡಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭ ಶಾಹಿದ್ ಕಪೂರ್ ಅವರು, ಪತ್ನಿ ಮೀರಾ ರಜಪೂತ್ ಫೋನ್‌ನಲ್ಲಿ ಬ್ಯುಸಿಯಾಗಿದ್ದರು ಎಂದು ತೋರಿಸುವ ಸಲುವಾಗಿ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದರು.

ವಿಡಿಯೊ ಮಾಡಿರುವುದು ಮೀರಾ ಅವರ ಗಮನಕ್ಕೆ ಬಂದಿರಲಿಲ್ಲ. ಅಲ್ಲದೆ, ಮೀರಾ ಅವರು ಫೋನ್‌ ಅನ್ನೇ ಮದುವೆಯಾಗಿದ್ದಾರೆ ಎಂದು ಶಾಹಿದ್ ಫೋಟೊಗೆ ಅಡಿಬರಹ ನೀಡಿದ್ದರು.

ಅದನ್ನು ನೋಡಿರುವ ಮೀರಾ ಅವರು, ನೀವು ಹೋಗಿ, ಮಂಚವನ್ನೇ ಮದುವೆಯಾಗಿ ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT