ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಾಹಾರಕ್ಕಾಗಿ ಇಟಲಿಯಲ್ಲಿ ಅಲೆದಾಡಿದ ಮೀರಾ ರಜಪೂತ್!

ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಮೀರಾ ಕಪೂರ್ ಇಟಲಿಗೆ ಪ್ರವಾಸ ತೆರಳಿದ್ದಾರೆ.

ಪ್ರವಾಸದ ಸುಂದರ ಕ್ಷಣಗಳನ್ನು ಆನಂದಿಸುವ ಜತೆಗೇ, ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಮತ್ತು ವಿಡಿಯೊಗಳನ್ನು ಅವರು ಪೋಸ್ಟ್ ಮಾಡುತ್ತಿದ್ದಾರೆ.

ಆದರೆ, ಇಟಲಿ ಪ್ರವಾಸದ ಅವಧಿಯಲ್ಲಿ ಮೀರಾ ರಜಪೂತ್ ಅವರು ಸಸ್ಯಾಹಾರವನ್ನು ಮಿಸ್ ಮಾಡಿಕೊಂಡಿದ್ದಾರೆ. ಸಸ್ಯಾಹಾರ ಸಿಗದೇ ಪರದಾಡಿದ್ದಾರೆ.

ಹೀಗಾಗಿ ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ತಮಗಾದ ಅನುಭವ ಹೇಳಿಕೊಂಡಿದ್ದು, ನೀವು ಸಸ್ಯಾಹಾರಿಯಾಗಿದ್ದರೆ ಇಲ್ಲಿ ನಿಮಗೆ ಕಷ್ಟವಾಗಬಹುದು. ಸಸ್ಯಾಹಾರದಲ್ಲಿ ಸೀಮಿತ ಆಯ್ಕೆಗಳಿವೆ ಎಂದು ಮೀರಾ ತಿಳಿಸಿದ್ದಾರೆ.

ವಿದೇಶದಲ್ಲಿ ಶುದ್ಧ ಸಸ್ಯಾಹಾರದ ಪರಿಕಲ್ಪನೆ ಇಲ್ಲದೇ ಇರುವುದರಿಂದ ತಮಗೆ ಆಹಾರದ ವಿಚಾರದಲ್ಲಿ ತೊಂದರೆಯಾಯಿತು. ಉಳಿದಂತೆ ಏನೂ ಸಮಸ್ಯೆಯಾಗಿಲ್ಲ ಎಂದು ಮೀರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT