ಬೆಂಗಳೂರು: ಬಾಲಿವುಡ್ ನಟಿ ಮತ್ತು ಕೆಜಿಎಫ್ ಹಿಂದಿ ಅವತರಣಿಕೆ ಖ್ಯಾತಿಯ ಮೌನಿ ರಾಯ್ ಬಿಡುವಾದಾಗಲೆಲ್ಲ ಪ್ರವಾಸ ತೆರಳುತ್ತಾರೆ.
ಹೊಸ ವರ್ಷಾಚರಣೆಗೆ ಅವರು ಗೆಳತಿ ಮತ್ತು ನಟಿ ಆಶ್ಕಾ ಜೊರಾಡಿಯ ಜತೆ ಬೀಚ್‌ಗೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಮೌನಿ ರಾಯ್, ಚಿರತೆ ಮೈಬಣ್ಣದ ಪ್ರಿಂಟ್ ಇರುವ ಬಿಕಿನಿ ಧರಿಸಿದ್ದು, ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ.
ಕನ್ನಡದ ಜನಪ್ರಿಯ ಚಿತ್ರ ‘ಕೆಜಿಎಫ್‘ನ ಹಿಂದಿ ಆವೃತ್ತಿಯ ಗಲೀ ಗಲೀ ಹಾಡಿನಲ್ಲಿ ಮೌನಿ ರಾಯ್ ನೃತ್ಯ ಮಾಡಿದ್ದರು.
ಮೌನಿ ಅವರು, 2022ರ ಫೆಬ್ರುವರಿಯಲ್ಲಿ ಅವರ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಜತೆ ಮದುವೆಯಾಗುವ ಸಿದ್ಧತೆಯಲ್ಲಿದ್ದಾರೆ.
ಸೂರಜ್ ಅವರು ದುಬೈನಲ್ಲಿ ಉದ್ಯಮಿಯಾಗಿದ್ದಾರೆ. ಮೌನಿ ಅವರು ಈಗಾಗಲೇ ಮದುವೆ ಕುರಿತು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ಪೂರಕವಾಗಿ, ಅವರ ಗೆಳತಿಯರು ಸಾಮಾಜಿಕ ತಾಣಗಳಲ್ಲಿ ವಿವಿಧ ಪೋಸ್ಟ್‌ಗಳನ್ನು ಹಾಕಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.