ಮಂಗಳವಾರ, ಡಿಸೆಂಬರ್ 10, 2019
17 °C

ಸಂಗೀತ ದಿಗ್ಗಜರ ಕ್ಲಾಸಿಕಲ್‌ ಕಛೇರಿ

Published:
Updated:
Prajavani

ಪಂಚಮ್ ನಿಶಾದ್ ಕ್ರಿಯೇಟಿವ್ಸ್ ಡಿಸೆಂಬರ್ 4 ರಂದು ನಗರದಲ್ಲಿ ‘ಕ್ಲಾಸಿಕಲ್ ಅಂಡ್ ಬಿಯಾಂಡ್ ಆ್ಯನ್ ಈವನಿಂಗ್ ಆಫ್ ಇಂಡಿಯನ್ ಮ್ಯೂಸಿಕ್’  ಸಂಗೀತ ಕಛೇರಿ ಆಯೋಜಿಸಿದೆ. 

ವಿಶ್ವವಿಖ್ಯಾತ ತಬಲಾ ಪಟು ಉಸ್ತಾದ್ ಜಾಕಿರ್ ಹುಸೇನ್, ಕೊಳಲುವಾದಕ ರಾಕೇಶ್ ಚೌರಾಸಿಯಾ, ಕಂಜೀರಾ ಕಲಾವಿದ ವಿ.ಸೆಲ್ವಗಣೇಶ್, ಮೃದಂಗದಲ್ಲಿ ಪತ್ರಿ ಸತೀಶ್‍ಕುಮಾರ್ ಮತ್ತು ಮ್ಯಾಂಡೋಲಿನ್‍ನಲ್ಲಿ ಯು.ರಾಜೇಶ್‍ ಅವರು ಸಂಗೀತದ ರಸದೌತಣ ಉಣಬಡಿಸಲಿದ್ದಾರೆ.

ವಸಂತನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿಸೆಂಬರ್ 4 ರಂದು ಸಂಜೆ 7 ಗಂಟೆಗೆ ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತದ ರಾಗ ಮತ್ತು ತಾಳದ ಮೇಳಗಳು ಅನಾವರಣಗೊಳ್ಳಲಿವೆ. ಸಾಂಪ್ರದಾಯಿಕ ಸಂರಚನೆಯ ಹೊರತಾದ ಸಂಗೀತ ಲಹರಿಯನ್ನು ಹರಿಸಲಿದ್ದಾರೆ. 

ಕಾರ್ಯಕ್ರಮದ ವಿವರ
ಕಾರ್ಯಕ್ರಮ:`ಕ್ಲಾಸಿಕಲ್ & ಬಿಯಾಂಡ್’
ದಿನಾಂಕ: 4ನೇ ಡಿಸೆಂಬರ್‌  
ಸ್ಥಳ: ಡಾ.ಬಿ.ಆರ್.ಅಂಬೇಡ್ಕರ್ ಭವನ, ವಸಂತನಗರ 
ಸಮಯ: ಸಂಜೆ 7 ಗಂಟೆ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು