ಶನಿವಾರ, ಮೇ 28, 2022
31 °C

ಮದುವೆಯಲ್ಲಿ ನೃತ್ಯ ಮಾಡಿದ್ದಕ್ಕೆ ಟ್ರೋಲ್‌ಗೆ ಒಳಗಾದ ಪಾಕ್ ನಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Ayesha Omar

ಬೆಂಗಳೂರು: ಪಾಕಿಸ್ತಾನ ಮೂಲದ ನಟಿ ಆಯೇಷಾ ಒಮರ್ ಅವರು ಮದುವೆಯೊಂದರಲ್ಲಿ ನೃತ್ಯ ಮಾಡಿದ್ದಕ್ಕೆ ಟ್ರೋಲ್‌ಗೆ ಸಿಲುಕಿದ್ದಾರೆ.

ಆಯೇಷಾ ಒಮರ್ ಅವರು ನಟಿಯಾಗಿ ಮಾತ್ರವಲ್ಲದೆ, ಗಾಯಕಿ ಮತ್ತು ಯೂಟ್ಯೂಬರ್ ಆಗಿಯೂ ಜನಪ್ರಿಯತೆ ಗಳಿಸಿದ್ದಾರೆ.

ಆಯೇಷಾ, ‘ಮುನ್ನಿ ಬದ್ನಾಮ್ ಹುಯಿ‘ ಹಾಡಿಗೆ ಮದುವೆ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದರು. ಅದರ ವಿಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು.

ಅಲ್ಲದೆ, ಟ್ರೋಲ್‌ ಜತೆಗೆ, ಕೆಲವರು ಮದುವೆಯಲ್ಲಿ ನೃತ್ಯ ಮಾಡಿದರೆ ಎಷ್ಟು ಚಾರ್ಜ್ ಮಾಡುತ್ತೀರಿ ಎಂದು ಕಾಮೆಂಟ್ ಮೂಲಕ ಪ್ರಶ್ನಿಸಿದ್ದರು.

ಇದಕ್ಕೆ ಆಯೇಷಾ ಅವರು ಕಾಮೆಂಟ್ ಮೂಲಕವೇ ಉತ್ತರಿಸಿದ್ದು, ನಾನು ಹಾಗೆಲ್ಲ ಯಾರದೋ ಮದುವೆಯಲ್ಲಿ ಕುಣಿಯುವುದಿಲ್ಲ. ಅದು ನ‌ನ್ನ ಆಪ್ತ ಗೆಳೆಯರ ಮದುವೆ ಕಾರ್ಯಕ್ರಮವಾಗಿತ್ತು. ಅಲ್ಲಿ ನಡೆದ ಸಂತೋಷಕೂಟದಲ್ಲಿ ಭಾಗಿಯಾಗಿದ್ದು ಹೊರತು ಸಂಭಾವನೆಗಾಗಿ ನೃತ್ಯ ಮಾಡಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ, ನಮಗೂ ಒಂದು ಸಾಮಾನ್ಯ ಜೀವನವಿರುತ್ತದೆ. ನಮ್ಮ ಬ್ಯುಸಿ ಜೀವನಶೈಲಿಯ ಮಧ್ಯೆಯೂ ಗೆಳೆಯರು ಮತ್ತು ಕುಟುಂಬಕ್ಕಾಗಿ ನಾವು ಸಮಯ ಮೀಸಲಿಡುತ್ತೇವೆ. ಎಲ್ಲವೂ ಹಣಕ್ಕಾಗಿಯೇ ಅಲ್ಲ ಎಂದು ಸರಿಯಾಗಿಯೇ ಉತ್ತರ ನೀಡುವ ಮೂಲಕ ಟ್ರೋಲ್‌ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು