ಮಂಗಳವಾರ, ಆಗಸ್ಟ್ 3, 2021
24 °C

ಕೊನೆಗೂ ಪುಟಾಣಿ ಯೋಗ ಸಂಗಾತಿ ಹುಡುಕಿದ ಪೂಜಾ ಬಾತ್ರಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Pooja Batra Instagram Post screengrab

ಬೆಂಗಳೂರು: ನಟಿ ಪೂಜಾ ಬಾತ್ರಾ ಫಿಟ್ನೆಸ್ ಮತ್ತು ಯೋಗದ ಕುರಿತು ಆಗಾಗ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಈ ಬಾರಿ ಪೂಜಾ ಬಾತ್ರ, ಯೋಗ ಮಾಡಲು ಪುಟಾಣಿ  ಸಂಗಾತಿಯನ್ನು ಹುಡುಕಿದ್ದಾರೆ. ಅದು ಬೇರಾರೂ ಅಲ್ಲ, ಅವರ ಸೋದರಳಿಯ..

ಪೂಜಾ ಅವರ ಪತಿ ನವಾಬ್ ಶಾ, ಈ ಚಿತ್ರಗಳನ್ನು ಸೆರೆಹಿಡಿದಿರುವುದಾಗಿ ನಟಿ ಹೇಳಿದ್ದು, ಪ್ರತಿ ದಿನ ಯೋಗ ಮಾಡುವ ಸಂದರ್ಭದಲ್ಲಿ ಸೋದರಳಿಯನೂ ಜತೆಗಿರುತ್ತಾನೆ, ಅವನೂ ಯೋಗ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಯೋಗ ಜೀವನದ ಕುರಿತು ಪೂಜಾ ಬಾತ್ರಾ ಹಲವು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಜನರು ಯೋಗ ಮಾಡುವುದರಿಂದ ಉಂಟಾಗುವ ಪ್ರಯೋಜನಗಳ ಕುರಿತು ಕೂಡ ಗಮನ ಸೆಳೆಯುತ್ತಿರುತ್ತಾರೆ.

ಮಿಸ್ ಇಂಡಿಯಾ ವಿಜೇತ ನಟಿ ಪೂಜಾ, ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಬಾಲಿವುಡ್ ಪ್ರವೇಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು