ಶನಿವಾರ, ಜುಲೈ 24, 2021
27 °C

ಬಾಸ್ಕೆಟ್‌ನಲ್ಲಿ ಕ್ಯೂಟ್‌ನೆಸ್: ಮಗಳು ಐರಾಳ ಫೋಟೊ ಹಂಚಿಕೊಂಡ ರಾಧಿಕಾ ಪಂಡಿತ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮಗಳು ಐರಾ ಬುಟ್ಟಿಯಲ್ಲಿ ಕುಳಿತಿರುವ ಸುಂದರ ಫೋಟೊವನ್ನು ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡು ವರ್ಷದ ಐರಾಳು ಕ್ಯಾಮೆರಾಗೆ ಪೋಸ್ ನೀಡುತ್ತಿರುವುದು ಫೋಟೊದಲ್ಲಿದೆ. ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರು 2018ರಲ್ಲಿ ಹೆಣ್ಣು ಮಗು ಐರಾ ಮತ್ತು 2019ರಲ್ಲಿ ಗಂಡು ಮಗು ಯಥರ್ವ್ ಅವರನ್ನು ಸ್ವಾಗತಿಸಿದ್ದರು.

ರಾಧಿಕಾ ಪಂಡಿತ್ ತಮ್ಮ ಇಬ್ಬರು ಮಕ್ಕಳ ಥ್ರೋಬ್ಯಾಕ್ ಫೋಟೋಗಳು ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಸಣ್ಣ ವಿರಾಮ ತೆಗೆದುಕೊಂಡಿದ್ದ ರಾಧಿಕಾ, 'ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಆದರೆ ನಿಮ್ಮಲ್ಲಿ ಧನಾತ್ಮಕ ಚಿಂತನೆ ಮೂಡಿಸಲು ಮತ್ತು ಮುಖದಲ್ಲಿ ನಗು ಕಾಣಿಸುವಂತೆ ಮಾಡಲು ನಾನು ಸದಾ ಇರುತ್ತೇನೆ. ಪ್ರೀತಿ ಇರಲಿ. ತನ್ನ ಕುಟುಂಬ ಸದಸ್ಯರ ಫೋಟೋಗಳನ್ನು ನಿರಂತರವಾಗಿ ಹಂಚಿಕೊಳ್ಳುವುದಾಗಿ' ಎಲ್ಲರಿಗೂ ಭರವಸೆ ನೀಡಿದ್ದರು.

ಇಂದು (ಜು.9) ಐರಾ ಯಶ್‌ನ ಕ್ಯೂಟ್ ಫೋಟೊವನ್ನು ಹಂಚಿಕೊಂಡಿರುವ ರಾಧಿಕಾ, 'ವೀಕೆಂಡ್‌ಗಾಗಿ ಬಾಸ್ಕೆಟ್‌ನಲ್ಲಿ ಕ್ಯೂಟ್‌ನೆಸ್' ಎಂದು ಶೀರ್ಷಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ರಾಧಿಕಾ ಪಂಡಿತ್ ಮತ್ತು ಯಶ್ ಅವರ ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಸರಳವಾಗಿ ಮನೆಯವರು ಮತ್ತು ಆಪ್ತರ ಸಮ್ಮುಖದಲ್ಲಿ ಪೂಜೆ, ಮಂಗಳ ಕಾರ್ಯ ನೆರವೇರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು