ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೇ ದಿನದಲ್ಲಿ ಸನ್ನಿ ಲಿಯೋನ್ ಮಧುಬನ್ ಹಾಡಿನ ಸಾಹಿತ್ಯ ಬದಲಾವಣೆ: ಸರಿಗಮ ಹೇಳಿಕೆ

Last Updated 28 ಡಿಸೆಂಬರ್ 2021, 2:10 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಸನ್ನಿ ಲಿಯೋನ್ ಅವರ ‘ಮಧುಬನ್‌ ಮೇ ರಾಧಿಕಾ ನಾಚೆ‘ ವಿಡಿಯೊ ಆಲ್ಬಂ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಹಾಡಿನ ಸಾಹಿತ್ಯ ಮತ್ತು ಶೀರ್ಷಿಕೆಯನ್ನು ಬದಲಾಯಿಸುವುದಾಗಿ ಸರಿಗಮ ಮ್ಯೂಸಿಕ್ ಹೇಳಿದೆ.

ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸನ್ನಿ ಲಿಯೋನ್ ಮಧುಬನ್ ಹಾಡಿನ ಸಾಹಿತ್ಯ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಹೀಗಾಗಿ ತಕ್ಷಣವೇ ಅದನ್ನು ಸರಿಪಡಿಸಿ, ಕ್ಷಮೆಯಾಚಿಸಬೇಕು ಎಂದು ಎಚ್ಚರಿಸಿದ್ದರು.

ಅದಾದ ಬೆನ್ನಲ್ಲೇ ಹೇಳಿಕೆ ಪ್ರಕಟಿಸಿರುವ ಸರಿಗಮ ಕಂಪನಿ, ಜನರ ಭಾವನೆ ಮತ್ತು ಅಭಿಪ್ರಾಯವನ್ನು ಗೌರವಿಸಿ, ಮಧುಬನ್ ಹಾಡಿನ ಸಾಹಿತ್ಯ ಮತ್ತು ಶೀರ್ಷಿಕೆಯನ್ನು ಬದಲಾಯಿಸಿ ಮೂರು ದಿನದೊಳಗಾಗಿ ಹೊಸ ಹಾಡನ್ನು ಅಪ್‌ಲೋಡ್ ಮಾಡಲಾಗುವುದು ಎಂದು ಟ್ವೀಟ್ ಮಾಡಿದೆ.

ಸನ್ನಿ ಲಿಯೋನ್ ಹಾಡನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಬೃಂದಾವನದ ಅರ್ಚಕರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಸಾಮಾಜಿಕ ತಾಣಗಳಲ್ಲೂ ಜನರಿಂದ ವಿರೋಧ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT