ಸೋಮವಾರ, ಅಕ್ಟೋಬರ್ 3, 2022
24 °C
ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಜೋಡಿ ಸಾಮಾಜಿಕ ತಾಣದಲ್ಲಿ ಹೊಸ ಪೋಸ್ಟ್

ಜೋಡಿ ಎಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟ ಶಾಹಿದ್ ಕಪೂರ್–ಮೀರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಬಾಲಿವುಡ್‌ ಜೋಡಿಗಳು ಎಂದರೆ ಸಾಮಾನ್ಯವಾಗಿ ಅವರು ಚಿತ್ರರಂಗದಲ್ಲೇ ಪರಸ್ಪರ ಪ್ರೀತಿಸಿ ಮದುವೆಯಾದವರಾಗಿರುತ್ತಾರೆ ಎಂಬ ಮಾತಿದೆ.

ಆದರೆ, ಶಾಹಿದ್ ಕಪೂರ್ ಮಾತ್ರ ಚಿತ್ರರಂಗದ ಹೊರಗಿನ ಮೀರಾ ರಜಪೂತ್ ಅವರನ್ನು ಮದುವೆಯಾಗಿದ್ದಾರೆ.

ಈ ಜೋಡಿ, ಸಾಮಾಜಿಕ ತಾಣಗಳಲ್ಲಿ ಸದಾ ಸಕ್ರಿಯರಾಗಿದ್ದುಕೊಂಡು, ಪರಸ್ಪರ ಕಾಲೆಳೆಯುವ ಮತ್ತು ತಮಾಷೆಯ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ.

ಜೋಡಿ ಎಂದರೆ ಹೀಗಿರಬೇಕು ಎನ್ನುವಂತೆ ಮೀರಾ ರಜಪೂತ್ ಮತ್ತು ಶಾಹಿದ್ ಕಪೂರ್, ವಿಡಿಯೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಬ್ರುನೋ ಮಾರ್ಸ್ ಅವರ ‘ಮ್ಯಾರಿ ಯು‘ ಟ್ರ್ಯಾಕ್‌ಗೆ ಈ ಜೋಡಿ ಹೆಜ್ಜೆ ಹಾಕಿದ್ದು, ಅಭಿಮಾನಿಗಳ ಮನಸ್ಸು ಗೆದ್ದಿದೆ.

2015ರ ಜುಲೈನಲ್ಲಿ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ವಿವಾಹವಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು