ಬೆಂಗಳೂರು: ಲಾಕ್‌ಡೌನ್ ಸಡಿಲಿಕೆ ಬಳಿಕ ಬೇಕಾಬಿಟ್ಟಿ ತಿರುಗಾಡುತ್ತಿರುವ ಜನರಿಗೆ ನಟಿ ಸನ್ನಿ ಲಿಯೋನ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ದೇಶದಲ್ಲಿ ಕೋವಿಡ್ 19 ಎರಡನೇ ಅಲೆ ಇನ್ನೇನು ಮುಗಿಯುತ್ತಿದೆ. ಅಷ್ಟರಲ್ಲೇ ಝೀಕಾ ವೈರಸ್, ಡೆಲ್ಟಾ ವೈರಸ್ ಸದ್ದು ಕೇಳಿಬಂದಿದೆ. ಅದರ ಬೆನ್ನಲ್ಲೇ ಲಾಕ್‌ಡೌನ್ ಸಡಿಲಿಸಲಾಗಿದೆ. ಆದರೆ ಜನರು ಮಾತ್ರ ಮೈಮರೆತು ಪ್ರವಾಸ-ತಿರುಗಾಟದಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಅಭಿಮಾನಿಗಳು ಮತ್ತು ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿರುವ ನಟಿ ಸನ್ನಿ ಲಿಯೋನ್, ಪರ್ವತಗಳು ಎಲ್ಲೂ ಹೋಗುವುದಿಲ್ಲ.. ಅಲ್ಲಿಯೇ ಇರುತ್ತವೆ.. ನೀವು ಕೂಡ ಅಷ್ಟೇ, ಮನೆಯಲ್ಲಿಯೇ ಇರಿ, ಎಲ್ಲೂ ಹೋಗಬೇಡಿ, ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ..