ನವದೆಹಲಿ: ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಆಕೆಯ ಸೋಶಿಯಲ್ ಮೀಡಿಯಾವನ್ನು ಗಮನಿಸಿದರೆ ಇದು ನಿಜವೆನಿಸುತ್ತದೆ. ಹಾಗಾಗಿಯೇ, ಅವರ ಪ್ರಯಾಣದ ಮೇಲಿನ ಪ್ರೀತಿ ಸನ್ನಿ ಲಿಯೋನ್ ಅವರನ್ನು ಮಾಲ್ಡೀವ್ಸ್‌ಗೆ ಕರೆದೊಯ್ದಿದೆ. ಹೀಗಾಗಿ ಅಲ್ಲಿನ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸೋಮವಾರ ಗುಲಾಬಿ ಮತ್ತು ನೀಲಿ ಬಣ್ಣದ ಈಜುಡುಗೆ ಮತ್ತು ಕೇಪ್‌ನಲ್ಲಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ, 'ಶುಭೋದಯ ಮಾಲ್ಡೀವ್ಸ್!' ಎಂದು ಬರೆದಿದ್ದಾರೆ. ಈ ಫೋಟೊವನ್ನು ಮೆಚ್ಚಿಕೊಂಡಿರುವ ನಟಿಯ ಅಭಿಮಾನಿಗಳು ಹೃದಯದ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.

ಅದಾದ ಕೆಲವೇ ಗಂಟೆಗಳ ಬಳಿಕ ಸನ್ನಿ ಲಿಯೋನ್ ಮತ್ತೊಮ್ಮೆ ಸೂರ್ಯ, ಮರಳು ಮತ್ತು ಸಮುದ್ರದಿಂದ ಸುತ್ತುವರೆದಿರುವ ಬಗ್ಗೆ ಎಷ್ಟೊಂದು ಉತ್ಸುಕನಾಗಿದ್ದೇನೆ ಎಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ತನ್ನ ಅಭಿಮಾನಿಗಳಿಗೆ ಚುಂಬನವನ್ನು ಕಳುಹಿಸುತ್ತಿರುವುದನ್ನು ಕಾಣಬಹುದು. ಶೀರ್ಷಿಕೆಯಲ್ಲಿ, 'ಬ್ಯಾಕ್ ಇನ್ ಪ್ಯಾರಡೈಸ್!' ಎಂದು ಬರೆದಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಸನ್ನಿ ಲಿಯೋನ್, ಸಂತೋಷದಿಂದ ನೃತ್ಯ ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ, ಹೃದಯದ ಕಣ್ಣಿರುವ ಎಮೋಜಿಯೊಂದಿಗೆ 'ಭಾನುವಾರದ ಮನಸ್ಥಿತಿ' ಎಂದು ಹೇಳಿದ್ದಾರೆ.

ಪ್ರವಾಸ ಕೈಗೊಂಡಿಲ್ಲದಿರುವ ಸಮಯದಲ್ಲಿ ಸನ್ನಿ ಲಿಯೋನ್ ತಮ್ಮನ್ನು ತಾವು ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇತ್ತೀಚೆಗಷ್ಟೇ, ನಟಿ ಹಾಡೊಂದರ ಅಭ್ಯಾಸದ ವಿಡಿಯೊವನ್ನು ಹಂಚಿಕೊಂಡಿದ್ದರು. ಶೀರ್ಷಿಕೆಯಲ್ಲಿ, 'ದಿ ರಿಹರ್ಸಲ್!' ಎಂದು ಬರೆದಿದ್ದರು.

ಸನ್ನಿ ಲಿಯೋನ್ ಅವರು 2012 ರ ಜಿಸ್ಮ್ 2 ಚಿತ್ರದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅವರು ರಿಯಾಲಿಟಿ ಡೇಟಿಂಗ್ ಶೋ ಸ್ಪ್ಲಿಟ್ಸ್‌ವಿಲ್ಲಾದಲ್ಲಿಯೂ ನಿರೂಪಕಿಯಾಗಿ ಕಾಣಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.