ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದ್‌ಶಾ ಜತೆಗೆ ಹೊಸ ವಿಡಿಯೊದಲ್ಲಿ ಕಾಣಿಸಿಕೊಂಡ ನಟಿ ತಮನ್ನಾ

Last Updated 9 ಮಾರ್ಚ್ 2022, 11:08 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನ ಸೆಲೆಬ್ರಿಟಿ ರ‍್ಯಾಪರ್‌ ಬಾದ್‌ಶಾ, ನಟಿ ತಮನ್ನಾ ಭಾಟಿಯಾ ಅವರ ಜತೆಗಿನ ಹೊಸ ಮ್ಯೂಸಿಕ್ ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ.

‘ತಬಾಹಿ‘ ಹೆಸರಿನ ವಿಡಿಯೊ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 23 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.

ಈ ವಿಡಿಯೊದಲ್ಲಿ ತಮನ್ನಾ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾದ್‌ಶಾ ಜತೆಗಿನ ಮೊದಲ ಮ್ಯೂಸಿಕ್ ವಿಡಿಯೊ ಇದಾಗಿದ್ದು, ಜನರ ಪ್ರತಿಕ್ರಿಯೆ ಕಂಡು ಖುಷಿಯಾಗಿದೆ ಎಂದು ತಮನ್ನಾ ಹೇಳಿಕೊಂಡಿದ್ದಾರೆ.

ಬಾದ್‌ಶಾ ಅವರು ಬಾಲಿವುಡ್‌ ಸೆಲೆಬ್ರಿಟಿಗಳ ಸಹಯೋಗದೊಂದಿಗೆ ವಿವಿಧ ರೀತಿಯ ಸಂಗೀತ ಸಂಯೋಜನೆಯಲ್ಲಿ ರ‍್ಯಾಪ್‌ ಮ್ಯೂಸಿಕ್ ವಿಡಿಯೊಗಳನ್ನು ಪರಿಚಯಿಸುತ್ತಿರುತ್ತಾರೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ಅವರ ಜುಗ್ನು ರ‍್ಯಾಪ್‌ ವಿಡಿಯೊ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT