ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜಿಕೆ ಸ್ಮರಣೆಗೆ ‘ಬೀದಿ ರಂಗ ದಿನ’

Last Updated 25 ಜೂನ್ 2019, 19:45 IST
ಅಕ್ಷರ ಗಾತ್ರ

ಹೋರಾಟ–ಅರಿವು–ಸಂಭ್ರಮದ ಸಾಕ್ಷೀಪ್ರಜ್ಞೆಯೇ ಸಿಜಿಕೆ ಎನ್ನುವ ನಂಬಿಕೆಯೊಂದಿಗೆ ಸಮಾನ ಮನಸ್ಕ ಸಾಂಸ್ಕೃತಿಕ ಮನಸುಗಳು ಸೇರಿ ಜೂನ್‌ 27ರಂದು ‘ಸಿಜಿಕೆ ಬೀದಿ ರಂಗ ದಿನ’ಆಯೋಜಿಸುತ್ತಿವೆ. ‘ಮೌಲ್ಯ ಮತ್ತು ಸಿದ್ಧಾಂತಗಳು ಕ್ಲೀಷೆ ಎನ್ನಿಸುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ಚಿಂತನೆಗಳು ಹಾದಿ ತಪ್ಪುತ್ತಿವೆ. ಈ ಸಂದರ್ಭದಲ್ಲಿ ಜನಪರವಾದ ನಿಲುವುಗಳು ಮತ್ತೆ ಗರಿಗೆದರಬೇಕಿದೆ ಎನ್ನುವ ಆಶಯ ಈ ಕಾರ್ಯಕ್ರಮದ್ದು. ಜೂನ್‌ 27 ಸಿಜಿಕೆ ಹುಟ್ಟು ಹಬ್ಬ. ನಾಡಿನ ಮಹಾನ್‌ ರಂಗಚೇತನ, ಸಂಘಟಕ ಸಿಜಿಕೆ ನೆನಪಿಗೆ ಒಂದು ಹೊಸ ಬೀದಿನಾಟಕದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ ಮತ್ತು ಬೆಂಗಳೂರು ಆರ್ಟ್‌ ಫೌಂಡೇಶನ್‌ ಸಂಘಟಕರು ತಿಳಿಸಿದ್ದಾರ.

ಉದ್ಘಾಟನೆ: ರಂಗಕರ್ಮಿ ಸಿ.ಕೆ. ಗುಂಡಣ್ಣ, ಅಧ್ಯಕ್ಷತೆ: ಲಲಿತ ಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಎಂ.ಎಸ್‌. ಮೂರ್ತಿ, ಅಭಿನಂದನಾ ನುಡಿ: ಲೇಖಕ ಎಲ್‌ ಎನ್‌ ಮುಕುಂದರಾಜ್‌, ಅತಿಥಿಗಳು: ಕತೆಗಾರ ಹನಮಂತ ಹಾಲಿಗೇರಿ.

ನಿರ್ವಹಣೆ: ಕಲಾವಿದ ಓ ವೆಂಕಟೇಶ್‌, ಪ್ರದೀಪ್‌ ತಿಪಟೂರು. ಉಪಸ್ಥಿತಿ: ಸಿಜಿಕೆ ರಂಗ ಪುರಸ್ಕಾರ ಪುರಸ್ಕೃತ ಕತೆಗಾರ ಕೇಶವರೆಡ್ಡಿ ಹಂದ್ರಾಳ.ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ಅಭಿನಯಿಸುವ ಕುವೆಂಪು ರಚಿತ ‘ದಶಾನನ ಸ್ವಪ್ನಸಿದ್ದಿ’ ನಾಟಕ
(ನಿ: ಮಂಜುನಾಥ್‌ ಎಲ್‌ ಬಡಿಗೇರ್‌) ಪ್ರದರ್ಶನ.

ಸ್ಥಳ: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ ರಸ್ತೆ.
ಸಂಜೆ 6ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT