ಭಾನುವಾರ, ಸೆಪ್ಟೆಂಬರ್ 22, 2019
27 °C

ಪರಿಶುದ್ಧಭಾವದ ‘ಕಾಮ್ಯ ಕಲಾ ಪ್ರತಿಮಾ’

Published:
Updated:
Prajavani

ರಂಗಭೂಮಿ ಉಡುಪಿ, ಸೆಪ್ಟೆಂಬರ್‌ 7ರಂದು ‘ಕಾಮ್ಯ ಕಲಾ ಪ್ರತಿಮಾ’ ನಾಟಕ ಪ್ರದರ್ಶನ ನೀಡಲಿದೆ.

ಕುಮಾರವ್ಯಾಸ, ಕುವೆಂಪುರವರ ಮಹಾಕಾವ್ಯಗಳ ಸ್ತ್ರೀ ಸಂವೇದನಾಶೀಲ ಕತೆಗಳನ್ನು ಆಯ್ದು ಈ ನಾಟಕವನ್ನು ರಚಿಸಲಾಗಿದೆ. ಇದರಲ್ಲಿ ವಿರಾಟಪರ್ವದ ಸೈರಂಧ್ರಿ ಕತೆ, ‘ಶ್ರೀ ರಾಮಾಯಣದರ್ಶನಂ’ನ ರಾವಣ ಪಾತ್ರಗಳ ಮೂಲಕ ನಾಟಕ ಮುಂದುವರಿಯುತ್ತದೆ.

ಕೀಚಕ ಮಹಾ ಕಾಮುಕನ ಪ್ರತಿಮೆ. ಆತನಿಗೂ ಒಂದು ಒಳಮನಸ್ಸಿದ್ದರೆ ಆ ಮನಸ್ಸಿನ ತುಮುಲ ಹೇಗಿದ್ದಿರಬಹುದು?, ಸಾಯುವ ಕೊನೆ ಗಳಿಗೆಯಲ್ಲಿ ರಾವಣ, ಸೀತೆಯ ಬಗ್ಗೆ ಮಾತೃತ್ವ ಭಾವ ತಾಳುವ ಸಂಗತಿಗಳು ಈ ನಾಟಕದ ಹರವು. ನಿರ್ದೇಶನ– ಗಣೇಶ್‌ ಮಂದಾರ್ತಿ.

ಸ್ಥಳ– ರಂಗಶಂಕರ, ಜೆ.ಪಿ ನಗರ, ಸಂಜೆ 3.30 ಹಾಗೂ ರಾತ್ರಿ 7.30

ಟಿಕೆಟ್‌ ದರ–  ₹100, ₹ 150

Post Comments (+)