ಬೆಂಗಳೂರು: ಸಮಷ್ಟಿ ರಂಗ ತಂಡವು ಜೂನ್ 3 ರಿಂದ ಮೂರು ದಿನಗಳ ನಾಟಕೋತ್ಸವವನ್ನು ರಂಗಶಂಕರದಲ್ಲಿ ನಡೆಸಲಿದೆ.

ಸಮಷ್ಟಿ ನಾಟಕೋತ್ಸವ 2025

ಸಮಷ್ಟಿ ಕಳೆದ 25 ವರ್ಷಗಳಿಂದ ನಿರಂತರ ರಂಗ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದೇ ಜೂನ್ ತಿಂಗಳಲ್ಲಿ 3 ದಿನಗಳ ನಾಟಕೋತ್ಸವವನ್ನು ಆಯೋಜಿಸುತ್ತಿದೆ. ತಂಡವು ಇದುವರೆಗೆ ಪ್ರಯೋಗಿಸಿದ್ದ ಮೂರು ಜನಪ್ರಿಯ ಹಾಗೂ ಹಾಸ್ಯ ನಾಟಕಗಳನ್ನು ಈ ನಾಟಕೋತ್ಸವದಲ್ಲಿ ಪ್ರದರ್ಶಿಸಲಾಗುವುದು.

ನೀರು ಕುಡಿಸಿದ ನೀರೆಯರು

ಪ್ರದರ್ಶನ : ಜೂನ್ 3, ಮಂಗಳವಾರ, ರಂಗಶಂಕರದಲ್ಲಿ ಸಂಜೆ 7.30 ಗಂಟೆಗೆ.

ಶೇಕ್ಸ್ಪಿಯರ್ ಮಹಾಕವಿಯ “ ದ ಮೆರ್ರಿ ವೈವ್ಸ್ ಆಫ್ ವಿಂಡ್ಸರ್” ವಿದ್ವಾಂಸರ ಅಭಿಪ್ರಾಯದಂತೇ ಅವನ ನಾಟಕಗಳಲ್ಲೇ ಅತ್ಯಂತ ಕಡಿಮೆ ಸಮಯದಲ್ಲಿ ರಚಿಸಿ ಪ್ರಯೋಗವಾಗಿರುವಂತಹುದು. ಕೇವಲ ಮನೋರಂಜನೆಯನ್ನು ಗುರಿಯಾಗಿಸಿಟ್ಟುಕೊಂಡು, ಹಣ ಮತ್ತು ವ್ಯಾಪಾರ ವಹಿವಾಟುಗಳ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳಲು ವೇಷ ಹಾಕಿಕೊಳ್ಳುವ ಡಾಂಬಿಕ ವ್ಯಕ್ತಿಯೋರ್ವನು ತನ್ನ ಸ್ತ್ರೀಲೋಲುಪತೆಯಲ್ಲಿ ಎದುರಿಸುವ ಹಾಸ್ಯಮಯ ಸನ್ನಿವೇಶಗಳನ್ನು ಪೋಣಿಸಿ ಈ ನಾಟಕವನ್ನು ರಚಿಸಲಾಗಿದೆ. ಮೈಸೂರು ಪ್ರಾಂತ್ಯದ ಊರು ತೆರೆಕಣಾಂಬಿಗೆ ಅನ್ವಯಿಸಿ ಈ ನಾಟಕವನ್ನು ರೂಪಾಂತರಿಸಲಾಗಿದೆ.

ಅನ್ವರ್ಥವಾಗಿಯೇ ಈ ನಾಟಕವು ಮಹಿಳಾ ಸಬಲೀಕರಣದ ಬಗ್ಗೆ ಸ್ಪಷ್ಟ ಆಶಯ ಹೊಂದಿದ್ದು, ಪ್ರೀತಿ, ಮದುವೆ, ಈರ್ಷ್ಯೆ, ಹೊಟ್ಟೆಕಿಚ್ಚು, ಸೇಡು, ಸಮಾಜದ ವರ್ಗಭೇದ ನೀತಿ ಮತ್ತು ಹಣ ಮುಂತಾದುವುಗಳ ಸುತ್ತ ಹೆಣೆಯುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಶೇಕ್ಸ್ಪಿಯನ ನಾಟಕದಲ್ಲಿ ಕಾಣುವ ಕಾಲ್ಪನಿಕ ಅಂಶಗಳನ್ನು ಇಲ್ಲಿ ಬದಿಗಿಟ್ಟು ಸಮಕಾಲೀನ ಮತ್ತು ಸಹಜ ಅಂಶಗಳಿಗೆ ಹೆಚ್ಚಿನ ಗಮನ ಕೊಟ್ಟು ಬರೆದ ನಾಟಕವಿದು ಎಂದು ವಿಮರ್ಶಕರಲ್ಲಿ ಮೆಚ್ಚುಗೆ ಪಡೆದ ನಾಟಕವು ಇದಾಗಿದೆ.

“ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ''

ಪ್ರದರ್ಶನ : ಜೂನ್ 4, ಬುಧವಾರ, ರಂಗಶಂಕರದಲ್ಲಿ ಸಂಜೆ 7.30 ಗಂಟೆಗೆ.

ಇದೊಂದು ಕಾಲ್ಪನಿಕ ಕತೆಯಾಗಿದ್ದು, ಅಣುಬಾಂಬ್ ತಯಾರಿಕೆಯ ಸೂತ್ರಗಳನ್ನು ಪಡೆಯಲು ಜಪಾನ್ ಗೆ ಹೋದ ಹಿಟ್ಲರ್, ವಾಪಸ್ ಬರುವಾಗ ಪ್ರಮಾದವಶಾತ್ ಬೊಂಬಿಲವಾಡಿಯಲ್ಲಿ ಇಳಿಯುತ್ತಾನೆ. ಅಲ್ಲಿನ ಪೊಲೀಸ್ ಸ್ಟೇಷನ್ನ ವಯರ್ಲೆಸ್ ಫೊನ್ ಬಳಸಲು ಹೋಗಿ ಹೊರ ಬರಲಾರದೆ ನಾಟಕ ತಂಡವೊಂದಕ್ಕೆ ರವಾನಿಸಲ್ಪಡುತ್ತಾನೆ. ಹಿಟ್ಲರ್ ನನ್ನು ಬಚ್ಚಿಟ್ಟನೆಂಬ ಆರೋಪದಿಂದ ಬಂಧಿತನಾದ ನಾಟಕ ತಂಡದ ಮುಖ್ಯಸ್ಥನನ್ನು ಬಿಡಿಸಲು ತಂಡದ ಸದಸ್ಯರು ಬೇರೆ ಬೇರೆ ವೇಷದಲ್ಲಿ ಹರಸಾಹಸಪಟ್ಟು ಕಡೆಗೂ ತಮ್ಮ ನಾಟಕದ ಪ್ರದರ್ಶನವನ್ನು ಮುಗಿಸುತ್ತಾರೆ.

ಆದಿಯಿಂದ ಅಂತ್ಯದವರೆಗೂ ಹಾಸ್ಯಲೇಪಿತ ದೃಶ್ಯಗಳನ್ನು ಹೊಂದಿರುವ ಈ ನಾಟಕವು, ನಾಟಕ ತಯಾರಿ ಹಾಗೂ ಪ್ರದರ್ಶನದ ಗೊಂದಲ, ನಾಟಕಪ್ರೇಮಿ ಬ್ರಿಟೀಷ್ ಪೋಲೀಸ್ ಅಧಿಕಾರಿ ಮತ್ತು ಅಲ್ಲಿನ ಭಾರತೀಯ ಪೇದೆಯ ಪೇಚಾಟ ಮತ್ತು ಮರಳಿ ಜರ್ಮನಿಗೆ ಹೋಗಲು ಹಿಟ್ಲರನು ಪಡುವ ಪರದಾಟಗಳನ್ನು ಹಾಸ್ಯಮಯವಾಗಿ ಚಿತ್ರಿಸುತ್ತದೆ.

“ಮಿಸ್. ಸದಾರಮೆ”

ಪ್ರದರ್ಶನ : ಜೂನ್ 5, ಗುರುವಾರ, ರಂಗಶಂಕರದಲ್ಲಿ ಸಂಜೆ 7.30 ಗಂಟೆಗೆ.

ಮಿಸ್. ಸದಾರಮೆ ನಾಟಕವು ಬೆಳ್ಳಾವೆ ನರಹರಿ ಶಾಸ್ತ್ರಿಯವರಿಂದ ವಿರಚಿತವಾದ ಮೂಲ “ಸದಾರಮಾ ನಾಟಕಂ” ನ ಪರಿಷ್ಕೃತ ಆವೃತ್ತಿ. ಮೂಲತಃ ಈ ನಾಟಕವು ಗುಬ್ಬಿ ಕಂಪೆನಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡು ನಂತರ ಹಿರಣ್ಣಯ್ಯನವರಿಂದ ಮತ್ತೆ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ದವಾಗಿದೆ. ನಂತರ ಇದನ್ನು ಕೆ.ವಿ. ಸುಬ್ಬಣ್ಣನವರು ಪ್ರಸ್ತುತ ಸನ್ನಿವೇಶಕ್ಕೆ ಬದಲಾಯಿಸಿ “ಮಿಸ್. ಸದಾರಮೆ” ಎಂದು ಹೆಸರಿಸಿ ಬಿ.ವಿ. ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನ ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಕೆಲವು ಭಾಷೆಗಳಲ್ಲೂ ಪ್ರಯೋಗವಾದ ದಾಖಲೆಗಳಿವೆ.

ವರ್ತಕ ಬಂಗಾರ ಸೆಟ್ಟಿಯ ಮಗಳಾದ ಸದಾರಮೆಯಿಂದ ಆಕರ್ಶಿತನಾದ ರಾಜಕುಮಾರ, ರಾಜ್ಯ-ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದಾಗಿ ಗಂಡ-ಹೆಂಡತಿಯರು ಒಬ್ಬರಿಂದೊಬ್ಬರು ಅಗಲಿ, ಮುಗ್ದೆಯಾದ ಸದಾರಮೆ ಹಲವಾರು ಕಷ್ಟ-ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲಾ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ.

ಇಡೀ ನಾಟಕವು ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲ್ಪಟ್ಟಿದೆ. ನಿರ್ದೇಶಕರು ನಾಟಕದ ಮೂಲ ಕತೆಗೆ ಹೊಸ ವ್ಯಾಖ್ಯಾನವನ್ನು ನಿಡುವ ಪ್ರಯತ್ನವನ್ನು ಮಾಡಿದ್ದಾರೆ.

ಸಮಷ್ಟಿ ತಂಡ: ಸಮಷ್ಟಿ ತಂಡವು 2000 ನಲ್ಲಿ ಹುಟ್ಟಿಕೊಂಡ ರಂಗ ತಂಡ. ಹೊಸ ಪ್ರತಿಭೆಗಳನ್ನು ಹುಡುಕಿ, ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸಿ, ನಿರಂತರ ರಂಗ ಚಟುವಟಿಕೆಗಳನ್ನು ನಡೆಸುವುದು ಇದರ ಮುಖ್ಯ ಉದ್ದೇಶ.

ಈವರೆಗೆ ತಂಡವು 22 ನಾಟಕಗಳನ್ನು ತಯಾರಿಸಿ ಪ್ರದರ್ಶಿಸಿದೆ. ಇವುಗಳಲ್ಲಿ ಮುಖ್ಯವಾದವು, “ಕಂತು”, “ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ”, ನೀರು ಕುಡಿಸಿದ ನೀರೆಯರು”, “ಚಿತ್ರಪಟ”, “ಪ್ರಮೀಳಾರ್ಜುನೀಯಂ”, “ವಿಶಾಕೆ”, “ಚಿರಕುಮಾರ ಸಭಾ”, “ನಾಯೀಕತೆ”, “ಮಿಸ್ ಸದಾರಮೆ”, “ಕತೆ ಹೇಳತೀವಿ”, “ಆವಾಂತರ”, “ಕಥನ”, “ಪ್ರೀತಿ”, “ಶಾಂಡಿಲ್ಯ ಪ್ರಹಸನ”, “ಸಾಫಲ್ಯ”, “ಅಲೆಗಳಲ್ಲಿ ರಾಜಹಂಸಗಳು”, “ಮೃಚ್ಛಕಟಿಕ” ಮತ್ತು “ಹರಿಣಾಭಿಸರಣ”.

ರಂಗಭೂಮಿಯ ನಿರಂತರ ಕಲಿಕೆಗಾಗಿ ಈವರೆಗೆ ಇದು ಹಲವಾರು ಕಾರ್ಯಾಗಾರಗಳನ್ನು ನಡೆಸಿದೆ. ಅವುಗಳಲ್ಲಿ ಮುಖ್ಯವಾದವು, “ಯಕ್ಷಗಾನ ಕಾರ್ಯಾಗಾರ”, “ವಾಚಿಕಾಭಿನಯ ಕಾರ್ಯಾಗಾರ”, “ಲಯ-ತಾಳ ಕಾರ್ಯಾಗಾರ”, “ಪ್ರಸಾಧನ ಕಾರ್ಯಾಗಾರ”, “ರಂಗ ವಿನ್ಯಾಸ ಕಾರ್ಯಾಗಾರ”, “ಮೂಕಾಭಿನಯ ಕಾರ್ಯಾಗಾರ”, “ರಂಗ ಪರಿಕರ ಕಾರ್ಯಾಗಾರ” ಮತ್ತು “ರಂಗ ನಟನಾ ಕಾರ್ಯಾಗಾರ”.

ಸಮಷ್ಟಿಯ “ಚಿತ್ರಪಟ” ನಾಟಕವು ಮೂರು META ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, 2015 ರಲ್ಲಿ ಅಂತರ ರಾಷ್ಟ್ರೀಯ ನಾಟಕೋತ್ಸವ, ಭಾರತ ರಂಗ ಮಹೋತ್ಸವಕ್ಕೆ ಮತ್ತು ಬಹುರೂಪಿ ಉತ್ಸವಕ್ಕೆ ಆಯ್ಕೆಯಾಗಿತ್ತು. ಉಡುಪಿಯ ರಂಗಭೂಮಿ (ರಿ) ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಇದುವರೆಗೆ ತಂಡವು 3 ಭಾರಿ ಪ್ರಥಮ, 2 ಭಾರಿ ದ್ವಿತೀಯ ಮತ್ತು 1 ಭಾರಿ ತೃತೀಯ ಸ್ಥಾನವನ್ನು ಪಡೆದುಕೊಡಿರುತ್ತದೆ. BIAS ಮತ್ತು ART MANTRAM ಆಯೋಜಿಸಿದ್ದ ಯುವ ನಿರ್ದೇಶಕರ ನಾಟಕೋತ್ಸವದಲ್ಲಿ ತಂಡದ “ಹರಿಣಾಭಿಸರಣ” ನಾಟಕವು ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.