ಸೋಮವಾರ, ಅಕ್ಟೋಬರ್ 14, 2019
22 °C

ಎಮಿ ಅವಾರ್ಡ್ಸ್‌: ಗೇಮ್‌ ಆಫ್‌ ಥ್ರೋನ್ಸ್‌, ಫ್ಲೀಬ್ಯಾಗ್‌ ಅತ್ಯುತ್ತಮ ಕಾರ್ಯಕ್ರಮ

Published:
Updated:

ಲಾಸ್‌ ಏಂಜಲೀಸ್‌: ಸಿನಿಮಾ ಕ್ಷೇತ್ರದಲ್ಲಿ ಆಸ್ಕರ್‌(ಅಕಾಡೆಮಿ ಅವಾರ್ಡ್ಸ್‌) ಪ್ರಶಸ್ತಿಗಳಷ್ಟೇ ಕಿರುತೆರೆಯ ಕಾರ್ಯಕ್ರಮಗಳ ಪಾಲಿಗೆ ಎಮಿ ಅವಾರ್ಡ್ಸ್‌ ಸಹ ಪ್ರಾಮುಖ್ಯ ಪಡೆದಿದ್ದು, 71ನೇ ಪ್ರೈಮ್‌ಟೈಮ್‌ ಎಮಿ ಅವಾರ್ಡ್ಸ್‌ನಲ್ಲಿ ‘ಗೇಮ್‌ ಆಫ್‌ ಥ್ರೋನ್ಸ್‌’ ಮತ್ತು ‘ಫ್ಲೀಬ್ಯಾಗ್‌’ ಮುಂಚೂಣಿಯಲ್ಲಿವೆ. 

ಈ ಬಾರಿಯ ಎಮಿ ಅವಾರ್ಡ್ಸ್‌ನಲ್ಲಿ 32 ನಾಮನಿರ್ದೇಶನಗಳನ್ನು ಹೊಂದಿದ್ದ ಎಚ್‌ಬಿಒ ನಿರ್ಮಾಣದ ‘ಗೇಮ್‌ ಆಫ್‌ ಥ್ರೋನ್ಸ್‌‘ ಅತ್ಯುತ್ತಮ ಡ್ರಾಮಾ ಸರಣಿ ಪ್ರಶಸ್ತಿ ಪಡೆದಿದೆ. ಹಾಸ್ಯ ಸರಣಿ ಕಾರ್ಯಕ್ರಮಗಳ ಪೈಕಿ ‘ಫ್ಲೀಬ್ಯಾಗ್‌‘ ಪ್ರಶಸ್ತಿ ಪಡೆದಿದೆ. 

ಭಾರತದಲ್ಲಿ ನೆಟ್‌ಫ್ಲಿಕ್ಸ್‌ ನಿರ್ಮಾಣದ ವೆಬ್‌ಸರಣಿಗಳಾದ ‘ಸೇಕ್ರೆಡ್‌ ಗೇಮ್ಸ್‌‘ ಮತ್ತು ‘ಲಸ್ಟ್‌ ಸ್ಟೋರೀಸ್‌‘(ರಾಧಿಕಾ ಆಪ್ಟೆ) ಸಹ ನಾಮನಿರ್ದೇಶನವಾಗಿದೆ. ಆದರೆ, ಅಂತರರಾಷ್ಟ್ರೀಯ ಮಟ್ಟದ ಎಮಿ ಅವಾರ್ಡ್ಸ್‌ ಕಾರ್ಯಕ್ರಮ ನವೆಂಬರ್‌ 25ರಂದು ನಡೆಯಲಿದೆ. ಆವರೆಗೂ ಭಾರತೀಯ ಅಭಿಮಾನಿಗಳು ಕಾಯಬೇಕಿದೆ. 

ಟಿವಿ ಸಿನಿಮಾ ಪ್ರಶಸ್ತಿಯನ್ನು ‘ಬ್ಲ್ಯಾಕ್‌ ಮಿರರ್‌: ಬ್ಯಾಂಡೆಸ್ನಾಚ್‌‘ ಪಡೆದಿದೆ. ಚರ್ನೊಬಿಲ್‌, ಮಾರ್ವಲೆಸ್‌ ಮಿಸ್ಟರ್‌ ಮೈಸೆಲ್‌, ಸಾಟರ್ಡೇ ನೈಟ್‌ ಲೈವ್ ಸೇರಿದಂತೆ ಹಲವು ಕಾರ್ಯಕ್ರಮಗಳು ಪ್ರಶಸ್ತಿಗಳಿಗೆ ಪಾತ್ರವಾಗಿವೆ. 

ಪೋಸ್‌ ಟಿವಿ ಸರಣಿ ಕಾರ್ಯಕ್ರಮದಲ್ಲಿನ ಬಿಲಿ ಪೋರ್ಟರ್‌ಗೆ ಅತ್ಯುತ್ತಮ ನಟ(ಡ್ರಾಮಾ ವಿಭಾಗ) ಪ್ರಶಸ್ತಿ, ಕಿಲ್ಲಿಂಗ್‌ ಈವ್‌ನಲ್ಲಿನ ನಟನೆಗೆ ಜಾಡಿ ಕಮರ್‌ ಅತ್ಯುತ್ತಮ ನಟಿ, ಜೇಸನ್‌ ಬೇಟ್‌ಮನ್‌ ಅತ್ಯುತ್ತಮ ನಿರ್ದೇಶಕ(ಡ್ರಾಮಾ ವಿಭಾಗ–ಒಜಾರ್ಕ್‌), ಹ್ಯಾರಿ ಬ್ರಾಡ್‌ಬೀರ್‌ ಅತ್ಯುತ್ತಮ ನಿರ್ದೇಶಕ(ಹಾಸ್ಯ ವಿಭಾಗ–ಫ್ಲೀಬ್ಯಾಗ್‌) ಪ್ರಶಸ್ತಿ ಪಡೆದಿದ್ದಾರೆ. 


ಪೀಟರ್‌ ಡಿಂಕ್ಲೇಜ್‌

ಗೇಮ್‌ ಆಫ್‌ ಥ್ರೋನ್ಸ್‌ನಲ್ಲಿನ ನಟನೆಗಾಗಿ ಪೀಟರ್‌ ಡಿಂಕ್ಲೇಜ್‌ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇನ್ನೂ ಹಲವು ವಿಭಾಗಗಳಲ್ಲಿ ಅಮೆರಿಕದ ಕಿರುತೆರೆ ಕಾರ್ಯಕ್ರಮಗಳು ಪ್ರಶಸ್ತಿ ಪಡೆದಿವೆ. 

Post Comments (+)