ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಹಿ ನಿರ್ಮಾಣಕ್ಕಿಳಿದ ನಟ ರಮೇಶ್‌ ಅರವಿಂದ್‌

Published 14 ಡಿಸೆಂಬರ್ 2023, 23:30 IST
Last Updated 14 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನಟ ರಮೇಶ್ ಅರವಿಂದ್ ಅವರು ನಿರ್ಮಿಸುತ್ತಿರುವ ಹೊಸ ಧಾರಾವಾಹಿ ‘ಆಸೆ’. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸಂಜೆ 7.30ಕ್ಕೆ ಇದು ಪ್ರಸಾರವಾಗುತ್ತಿದೆ. ಸಾಮಾನ್ಯ ಜನರ ಅಸಾಮಾನ್ಯ ಕಥೆ ಇದಾಗಿದೆ. 

ಚಿಕ್ಕವನಿದ್ದಾಗ ಗೊತ್ತಿಲ್ಲದೇ ನಡೆದ ಘಟನೆಯಿಂದಾಗಿ ತಾಯಿಯಿಂದ ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ‘ಸೂರ್ಯ’ ಕಥಾನಾಯಕ.  ಈತನ ಮಾತು ಕೊಂಚ ಒರಟು ಆದರೆ ಮೃದುವಾದ ಮನಸು. ಮತ್ತೊಂದು ಕಡೆ ಬಡತನದಲ್ಲಿದ್ದರೂ ಸದಾ ಮಂದಹಾಸವನ್ನು ಹೊಂದಿರುವ ‘ಮೀನಾ’ ಈ ಕತೆಯ ನಾಯಕಿ. ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ತಾಯಿಯ ಎರಡನೇ ರೂಪ ಈ ಮೀನಾ. ಇವರಿಬ್ಬರ ಬದುಕು ಎದುರು ಬದುರಾದಾಗ ಮುಂದೇನಾಗುತ್ತದೆ ಎನ್ನುವುದೇ ಕಥೆ. 

ಧಾರಾವಾಹಿಯಲ್ಲಿ ನಟ, ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್ ಅವರು ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ನಿನಾದ್, ಪ್ರಿಯಾಂಕಾ, ಸ್ನೇಹಾ, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಸೇರಿದಂತೆ ಹಲವು ಕಲಾವಿದರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT