ಶನಿವಾರ, ಮೇ 28, 2022
21 °C

ಮನೋಜ್ ಬಾಜಪೇಯಿ: ಒಟಿಟಿ 2021ರ ಜನಪ್ರಿಯ ನಟ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

dh file

ಬೆಂಗಳೂರು: ಬಾಲಿವುಡ್ ನಟ ಮನೋಜ್ ಬಾಜಪೇಯಿ ಅವರು ಒಟಿಟಿ 2021ರ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟನಾಗಿ ಹೊರಹೊಮ್ಮಿದ್ದಾರೆ.

ಓಮ್ಯಾಕ್ಸ್ ಮೀಡಿಯಾ ನಡೆಸಿದ ಸಮೀಕ್ಷೆಯಲ್ಲಿ, ದೇಶದಲ್ಲಿ ಈ ವರ್ಷ ಬಿಡುಗಡೆಯಾದ ವೆಬ್ ಸರಣಿಗಳ ಪೈಕಿ ಮನೋಜ್ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ.

ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದ ಫ್ಯಾಮಿಲಿ ಮ್ಯಾನ್– 2 ಸರಣಿ, ಮನೋಜ್‌ ಅವರ ನಟನಾ ಕೌಶಲ್ಯಕ್ಕೆ ಸಾಕ್ಷಿಯಾಗಿತ್ತು.

ಎರಡನೇ ಸ್ಥಾನದಲ್ಲಿ ಪಂಕಜ್ ತ್ರಿಪಾಠಿ, ಮೂರನೇ ಸ್ಥಾನದಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಫ್ಯಾಮಿಲಿ ಮ್ಯಾನ್– 2ರಲ್ಲಿ ‘ರಾಜಿ‘ ಪಾತ್ರ ಮಾಡಿದ್ದ ಸಮಂತಾ ರುತ್ ಪ್ರಭು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ, ಟಾಪ್ 10 ಒಟಿಟಿ ಜನಪ್ರಿಯ ನಟರ ಪಟ್ಟಿಯಲ್ಲಿ ರಾಧಿಕಾ ಅಪ್ಟೆ, ಕೆಕೆ ಮೆನನ್, ಸೈಫ್ ಅಲಿ ಖಾನ್, ಸುಷ್ಮಿತಾ ಸೇನ್, ಜಿತೇಂದ್ರ ಕುಮಾರ್ ಮತ್ತು ತಮನ್ನಾ ಭಾಟಿಯಾ ಸ್ಥಾನ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು