ಬುಧವಾರ, ಜೂನ್ 3, 2020
27 °C

ಲಾಕ್ ಡೌನ್ ದಿನಗಳಲ್ಲಿ ಮನೆಯಿಂದ ‘ಆಡಿಷನ್‘ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಝೀ ಕನ್ನಡದ ಜನಪ್ರಿಯ ಸಂಗೀತ ಕಾರ್ಯಕ್ರಮ ಸರಿಗಮಪ ಲಿಟಲ್ ಚಾಂಪ್ಸ್ ಹಾಗು ಡ್ರಾಮಾ ಜ್ಯೂನಿಯರ್ಸ್ ಮತ್ತೆ ರಂಜಸಿಲು ನಿಮ್ಮ ಮುಂದೆ ಬರುತ್ತಿವೆ.

ಈ ಲಾಕ್‌ಡೌನ್‌ ಅವಧಿಯಲ್ಲಿ ಹೇಗೆ ಆಡಿಷನ್‌ ಮಾಡುತ್ತಾರೆ? ಹೇಗೆ ಕಾರ್ಯಕ್ರಮ ನಡಿಸಿಕೊಡುತ್ತಾರೆ ? ಎಂಬ ಚಿಂತೆಯೇ. ಯೋಚನೆ ಮಾಡಬೇಡಿ. ನಿಮಗೆ ಭಾಗವಹಿಸಲು ಆಸಕ್ತಿ ಇದ್ದರೆ, ನೀವು ಮನೆಯಿಂದಲೇ ಆಡಿಷನ್‌ನಲ್ಲಿ ಭಾಗವಹಿಸಬಹುದು

ಈಗ ‘ವರ್ಕ್‌ ಫ್ರಂ ಹೋಂ‘ ವ್ಯವಸ್ಥೆ ಇದೆಯಲ್ಲ, ಅದೇ ರೀತಿ ‘ಆಡಿಷನ್‌ ಫ್ರಂ ಹೋಂ‘ ಎಂಬ ವ್ಯವಸ್ಥೆಯನ್ನು ಝೀ ಕನ್ನಡ ವಾಹಿನಿಯವರು ಆಯೋಜಿಸುತ್ತಿದ್ದಾರೆ. ಆಸಕ್ತರು ಮನೆಯಿಂದಲೇ ಆಡಿಷನ್‌ ಕೊಡಲು ಅವಕಾಶವಿದೆ. ಅತಿ ದೊಡ್ಡ ಎರಡು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ನಿಮ್ಮ ಮಕ್ಕಳಿಗೆ ಆಸಕ್ತಿ ಇದ್ದರೆ,  ನಿಮ್ಮ ಮಕ್ಕಳ ಹಾಡಿನ ಆಡಿಯೊ ಕ್ಲಿಪ್ ಹಾಗೂ ಅಭಿನಯದ ವಿಡಿಯೊ ಕ್ಲಿಪ್‌ ಅನ್ನು ನಮಗೆ ಕಳುಹಿಸಿಕೊಡಿ. ಅಂದ ಹಾಗೆ, ವಾಟ್ಸ್‌ಆ್ಯಪ್ ಮೂಲಕವೇ ನಡೆಯಲಿದೆ ಮೆಗಾ ಆಡಿಷನ್.

ನೀವು ಮಾಡಬೇಕಾಗಿರುವುದು ಇಷ್ಟೇ. ಮೇಲೆ ತಿಳಿಸಿದಂತೆ ನಿಮ್ಮ ಮಕ್ಕಳ ಎರಡು ನಿಮಿಷದ ಹಾಡುಗಾರಿಕೆಯ ಆಡಿಯೊ ತುಣಕನ್ನು (ಸರಿಗಮಪ-18 : 9513134434) ಅಭಿನಯದ ವಿಡಿಯೊವನ್ನು (ಡ್ರಾಮಾ ಜ್ಯೂನಿಯರ್ಸ್-4 : 9538066602 ) ನಮಗೆ ಕಳುಹಿಸಿ ಕೊಡಿ ಎಂದು ಝೀ ವಾಹಿನಿ ಮನವಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.