ಗುರುವಾರ , ಏಪ್ರಿಲ್ 22, 2021
30 °C

Bigg Boss 8:‘ಹೊಲಸು ನಿದ್ದಿಯೋ, ನಿಧಿಯೋ?’ ತಪ್ಪಾಗಿ ಕೇಳಿಸಿಕೊಂಡು ಮಸಿ ಬಳಿದ ನಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್ ಬಾಸ್ ಕನ್ನಡದ ಕ್ವಾರಂಟೈನ್ ಟಾಸ್ಕ್ ವೇಳೆ ಆಟದ ನಿಯಮಗಳನ್ನು ಗಾಳಿಗೆ ತೂರಿ ಕ್ರೀಡಾ ಸ್ಫೂರ್ತಿ ಇಲ್ಲದ ಕಾರಣ ಟಾಸ್ಕ್ ಅನ್ನು ಬಿಗ್ ಬಾಸ್ ಅರ್ಧಕ್ಕೆ ಮುಗಿಸಿದ್ದರು. ಬಳಿಕ ತಪ್ಪು ಮಾಡಿದವರಿಗೆ ಪರಸ್ಪರ ಮಸಿ ಹಚ್ಚುವ ಕೆಲಸ ನೀಡಲಾಗಿತ್ತು. ಈ ವೇಳೆ, ನಿಧಿ ಸುಬ್ಬಯ್ಯ ಅವರು ಅರವಿಂದ್ ಮಾತುಗಳನ್ನು ತಪ್ಪಾಗಿ ಕೇಳಿಸಿಕೊಂಡು ಅವರ ವಿರುದ್ಧ ಹರಿಹಾಯ್ದಿದ್ದ ಪ್ರಕರಣ ಬೆಳಕಿಗೆ ಬಂದಿತು.

ಅರವಿಂದ್ ಅವರು ನನ್ನ ವಿರುದ್ಧ ‘ಹೊಲಸು ನಿಧಿ’ ಎಂಬ ಪದ ಬಳಸಿದರು. ಜೊತೆಗೆ ಕ್ರೀಡಾಸ್ಫೂರ್ತಿ ಮರೆತ ಕಾರಣ ಅವರಿಗೆ ಮಸಿ ಹಚ್ಚುವುದಾಗಿ ಹೇಳಿದರು.

ಅರವಿಂದ್ ‘ಹೊಲಸು ನಿದ್ದಿ’ ಎಂದು ಬಳಸಿದ ಪದವನ್ನು ‘ಹೊಲಸು ನಿಧಿ’ ಎಂದು ತಪ್ಪಾಗಿ ಕೇಳಿಸಿಕೊಂಡಿದ್ದರು. ಆರೋಪ ನಿರಾಕರಿಸಿದ ಅರವಿಂದ್, ನಾನು ಹೇಳಿದ್ದು, ‘ಹೊಲಸು ನಿದ್ದಿ, ನಿಧಿಯಲ್ಲ’ ಎಂದು ಸ್ಪಷ್ಟನೆ ಕೊಟ್ಟರಾದರೂ ಅಷ್ಟೊತ್ತಿಗೆ ಮಸಿ ಬಳಿದು ಆಗಿತ್ತು.

ಇದನ್ನೂ ಓದಿ.. Big Boss 8: ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು ಬೀಗಿದ ರಾಜೀವ್, 6 ಮಂದಿಗೆ ಮಸಿ

‘ಹೊಲಸು ನಿದ್ದಿಯೋ, ನಿಧಿಯೋ?’: ಕ್ವಾರಂಟೈನ್ ಟಾಸ್ಕ್ ವೇಳೆ ಸ್ಪರ್ಧಿಗಳು ಪರಸ್ಪರ ಬೈದಾಡಿಕೊಂಡಿದ್ದರು. ಮನುಷ್ಯರ ತಂಡದಲ್ಲಿದ್ದ ಅರವಿಂದ್ ತಂಡದ ಸದಸ್ಯರ ಜೊತೆ ಮಾತನಾಡುತ್ತಾ ಯಾವುದೋ ವಿಷಯಕ್ಕೆ‘ಹೊಲಸು ನಿದ್ದಿ’ ಎಂಬ ಪದ ಬಳಸಿದ್ದರು. ಸಮೀಪದಲ್ಲೇ ಇದ್ದ ವೈರಸ್ ತಂಡದ ನಿಧಿ ಸುಬ್ಬಯ್ಯ ನನ್ನ ಬಗ್ಗೆ ಅರವಿಂದ್ ‘ಹೊಲಸು ನಿಧಿ’ ಎಂಬ ಪದ ಬಳಸಿದ್ದಾರೆ ಎಂದು ಅರ್ಥ ಮಾಡಿಕೊಂಡಿದ್ದರು. ತಂಡದ ಸದಸ್ಯರು ಸಹ ಅದೇ ರೀತಿ ಅಂದುಕೊಂಡು ಅರವಿಂದ್ ವಿರುದ್ಧ ಕೆಂಡಕಾರಿದ್ದರು. ಈ ಬಗ್ಗೆ ಅರವಿಂದ್ ಸ್ಪಷ್ಟನೆ ನೀಡಿದರು.

ಅರವಿಂದ್ ಮಾತಿಗೆ ಪ್ರತಿಕ್ರಿಯಿಸಿದ ನಿಧಿ, ಅದು ಅಲ್ಲವಾದರೆ ನನಗೆ ಖುಷಿಯಾಗುತ್ತದೆ ಎಂದರು. ಆದರೆ, ಕೋಪಗೊಂಡಿದ್ದ ಅರವಿಂದ್ ನಿಮ್ಮಿಂದ ಅಷ್ಟೇ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಗೊಣಗಾಡಿದರು. ವೈರಸ್ ತಂಡವು ತಪ್ಪು ಮಾಡುತ್ತಿದ್ದಾಗ ನಿಮಗೆ ಕಣ್ಣು ಕಾಣಿಸುತ್ತಿರಲಿಲ್ಲವೇ ಎಂದು ಕಿಡಿಕಾರಿದರು.

ಇದಾದ, ಸ್ವಲ್ಪ ಸಮಯದಲ್ಲೇ ಅರವಿಂದ್ ಬಳಿಗೆ ತೆರಳಿದ ನಟಿ ನಿಧಿ ಸುಬ್ಬಯ್ಯ ಸಂಧಾನ ಮಾಡಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು