ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Big Boss 8: ಈ ವಾರ ನಾಮಿನೇಟ್ ಆದ 7 ಸದಸ್ಯರು: ನಾಮಿನೇಶನ್ನಿಂದ ಪಾರಾದ ಚಂದ್ರಚೂಡ್

Last Updated 6 ಏಪ್ರಿಲ್ 2021, 9:40 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಲ್ಲಿ 6ನೇ ವಾರ ಮತ್ತೆ 7ಸದಸ್ಯರು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಅರವಿಂದ್, ಪ್ರಶಾಂತ್ ಸಂಬರಗಿ, ಶಮಂತ್, ದಿವ್ಯಾ ಸುರೇಶ್, ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ರಾಜೀವ್ ಈ ಪಟ್ಟಿಯಲ್ಲಿದ್ದಾರೆ.

ಈ ಬಾರಿ ಕನ್ಫೇಶನ್ ಕೊಠಡಿಗೆ ಕರೆಯದೆ ಇದ್ದಲ್ಲಿಯೇ ನಾಮಿನೇಟ್ ಮಾಡಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಸೂಚಿಸಿದ್ದರು. ಈಗಾಗಲೇ, ಶಂಕರ್ ಅಶ್ವತ್ಥ್ ಅವರಿಂದ ನೇರ ನಾಮಿನೇಟ್ ಆಗಿರುವ ನಿಧಿ ಸುಬ್ಬಯ್ಯ, ಮನೆಯ ಹೊಸ ಸದಸ್ಯ ಚಕ್ರವರ್ತಿ ಚಂದ್ರಚೂಡ್ ಮತ್ತು ನಾಯಕ ಮಂಜು ಪಾವಗಡ ಅವರನ್ನು ಬಿಟ್ಟು ಉಳಿದವರ ಹೆಸರನ್ನು ನಾಮಿನೇಟ್ ಮಾಡಬೇಕಿತ್ತು.

ಎಂದಿನಂತೆ, ತಮಗೆ ತುಂಬಾ ಸ್ಪರ್ಧೆ ನೀಡುತ್ತಾರೆಂಬ ಕಾರಣಕ್ಕೆ ಬೈಕ್ ರೇಸರ್ ಅರವಿಂದ್ ಹೆಸರನ್ನು ಪ್ರಶಾಂತ್ ಸಂಬರಗಿ, ನಿಧಿ ಸುಬ್ಬಯ್ಯ ಮತ್ತಿತರರು ಸೂಚಿಸಿದರು. ಕಿರಿಕ್ ಎಂಬ ಕಾರಣಕ್ಕೆ ಸಂಬರಗಿ ಹೆಸರು ಸೂಚಿಸಲಾಯಿತು. ಪರಿಣಾಮಕಾರಿಯಾಗಿ ಪ್ರದರ್ಶನ ನೀಡದ ಕಾರಣಕ್ಕೆ ಶಮಂತ್ ಹೆಸರು ನಾಮಿನೇಟ್ ಮಾಡಲಾಯಿತು. ಟಾಸ್ಕ್‌ಗಳಲ್ಲಿ ಚುರುಕಿಲ್ಲದ ಕಾರಣ ಶುಭಾ ಪೂಂಜಾ ಹೆಸರನ್ನೂ ಕೆಲವರು ಸೂಚಿಸಿದರು.

ರಾಜೀವ್‌ ಹೆಸರು ಸೂಚಿಸಿದ ಮಂಜು: ಈ ವಾರದ ನಾಮಿನೇಶನ್‌ನಲ್ಲಿ ನಿಧಿ ಬಿಟ್ಟು ಐವರ ಹೆಸರನ್ನು ಮಾತ್ರ ಸದಸ್ಯರು ನಾಮಿನೇಟ್ ಮಾಡಿದ್ದರು. ಬಳಿಕ, ಬಿಗ್ ಬಾಸ್, ಮಂಜು ಪಾವಗಡ ಅವರಿಗೆ ‘ನಾಯಕನಾಗಿರುವ ನೀವು ಒಬ್ಬ ಸದಸ್ಯನನ್ನು ನಾಮಿನೇಟ್ ಮಾಡಬೇಕು’ ಎಂದು ಸೂಚಿಸಿದರು. ಇದರನ್ವಯ, ತಮಗೆ ಅತ್ಯಂತ ಟಫ್ ಕಾಂಪಿಟೇಟರ್ ಎಂಬ ಕಾರಣಕ್ಕೆ ರಾಜೀವ್ ಹೆಸರನ್ನು ಮಂಜು ಸೂಚಿಸಿದರು. ಈ ಮೂಲಕ 7ಸದಸ್ಯರು ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

ವೈಷ್ಣವಿ, ವಿಶ್ವನಾಥ್, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ ಮತ್ತು ನಾಯಕ ಮಂಜು ಪಾವಗಡ ಅವರು ಎಲಿಮಿನೇಶನ್ ಭಯವಿಲ್ಲದೆ ಈ ವಾರ ಮನೆಯಲ್ಲಿ ಮುಂದುವರಿದಿದ್ದಾರೆ.

ಅಂತರಂಗದ ಸತ್ಯ ಬಟಾ ಬಯಲು: ಈ ವಾರ ನಿಂತಲ್ಲಿಯೇ ಇಗ್ ಬಾಸ್ ಮನೆಯ ಸದಸ್ಯರು ನಾಮಿನೇಟ್ ಮಾಡಿರುವುದರಿಂದ ತಮ್ಮ ಹೆಸರು ಸೂಚಿಸಿದವರು ಯಾರು? ಎಂಬ ವಿಷಯ ಬಟಾ ಬಯಲಾಗಿದೆ. ಹಾಗಾಗಿ, ಈ ವಾರ ಈ ವಿಷಯ ಸ್ಪರ್ಧಿಗಳ ಮಧ್ಯೆ ಮನಸ್ತಾಪ ಹೆಚ್ಚಿಸಿದರೂ ಅಚ್ಚರಿ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT