ಶುಕ್ರವಾರ, ಏಪ್ರಿಲ್ 23, 2021
24 °C

Big Boss 8: ‘ಬ್ರದರ್’ ಆಗುವ ಯೋಗ್ಯತೆ ನಿನಗಿಲ್ಲ: ಸಂಬರಗಿ ವಿರುದ್ಧ ದಿವ್ಯಾ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ವಿವಾದದ ಸರಣಿ ಮುಂದುವರೆದಿದೆ. ಪದೇ ಪದೇ ಅರವಿಂದ್ ಜೊತೆ ಕಿರಿಕ್ ಮಾಡಿಕೊಳ್ಳುತ್ತಿರುವ ಸಂಬರಗಿ, ದಿವ್ಯಾ ಉರುಡುಗ ಅವರು ನಿನ್ನ ಗರ್ಲ್ ಫ್ರೆಂಡ್ ಎಂದು ಹೇಳುವ ಮೂಲಕ ದಿವ್ಯಾ ಉರುಡುಗ ಅವರ ಸಿಟ್ಟಿಗೆ ಗುರಿಯಾಗಿದ್ದಾರೆ.

ಆಗಿದ್ದಿಷ್ಟು.. ಇಟ್ಟಿಗೆಗಳನ್ನು ಸಂಗ್ರಹಿಸಿ ಗೋಪುರ ಕಟ್ಟುವ ಟಾಸ್ಕ್‌ನ ಅಂತಿಮ ಹಂತದಲ್ಲಿ ಇಟ್ಟಿಗೆ ಸಂಗ್ರಹಿಸಲು ಬಿಗ್ ಬಾಸ್ ಎರಡೂ ತಂಡಕ್ಕೆ ಕೊನೆಯ ಅವಕಾಶ ನೀಡಿದ್ದರು. ಈ ಸಂದರ್ಭ, ಪೈಪೋಟಿಗೆ ಬಿದ್ದ ಸದಸ್ಯರು ಒಬ್ಬರ ಇಟ್ಟಿಗೆಗಳನ್ನು ಮತ್ತೊಬ್ಬರು ಕದಿಯುತ್ತಾ.. ಇಟ್ಟಿಗೆಗಳನ್ನು ಒಡೆಯುತ್ತಾ ಟಾಸ್ಕ್‌ನಲ್ಲಿ ಮುಳುಗಿದ್ದರು. ಈ ವೇಳೆ, ಪ್ರಶಾಂತ್ ತಳ್ಳಿದರೆಂದು ಆರೋಪ ಮಾಡಿದ ಅರವಿಂದ್ ಜಗಳ ಮಾಡಿದರು. ಇದಕ್ಕೆ ಕೋಪಗೊಂಡ ಸಂಬರಗಿ, ನಿನ್ನ ಗರ್ಲ್ ಫ್ರೆಂಡ್ ಕೈಹಿಡಿದಿದ್ದಕ್ಕೆ ಕೋಪ ಬಂತಾ? ಎಂದು ಕಾಮೆಂಟ್ ಮಾಡಿದರು. ಮಧ್ಯ ಪ್ರವೇಶಿಸಿದ ದಿವ್ಯಾ ಉರುಡುಗ, ಏಯ್ ನನ್ನ ಹೆಸರು ಯಾಕೆ ಹೇಳ್ತೀಯಾ.. ಎಂದು ಕೂಗಾಡಿದರು. ಬಳಿಕ, ರಾಜೀವ್ ಸಹ ಹೆಣ್ಣುಮಕ್ಕಳ ಹೆಸರು ತರುವುದು ಸರಿಯಲ್ಲ ಎಂದು ತಿಳಿ ಹೇಳಿದರು.

‘ನಿನಗೆ ಬ್ರದರ್ ಎಂದು ಹೇಳಿಕೊಳ್ಳುವ ಅರ್ಹತೆ ಇಲ್ಲ’ : ಟಾಸ್ಕ್ ಮುಗಿದ ಬಳಿಕ ಮಂಜು ಪಾವಗಡ ಜೊತೆ ಸಂಬರಗಿಗೆ ಬುದ್ಧಿ ಹೇಳಲು ದಿವ್ಯಾ ಉರುಡುಗ ಮುಂದಾದರು. ಈ ಸಂದರ್ಭ ಸಂಬರಗಿ ತಮ್ಮ ಕಾಮೆಂಟ್‌ಗೆ ಎಂದಿನಂತೆ ಸಮರ್ಥನೆ ಕೊಟ್ಟಿದ್ದರಿಂದ ಕೋಪಗೊಂಡ ದಿವ್ಯಾ ಉರುಡುಗ ಕೂಗಾಡಿದರು. ಬ್ರದರ್ ಅಂತಾ ಹೇಳ್ತೀಯ. ಬ್ರದರ್ ಯಾರಾದರೂ ಹೀಗೆ ಮಾಡ್ತಾರಾ? ತನ್ನ ತಂಗಿಯನ್ನು ಬೇರೊಬ್ಬರ ಗರ್ಲ್ ಫೆಂಡ್ ಎಂದು ಹೇಳುತ್ತಾರಾ? ನಾನು, ಅರವಿಂದ್‌ಗೆ ಗರ್ಲ್ ಫ್ರೆಂಡ್ ಆಗಿರಲಿ.. ಹೆಂಡತಿ ಅಥವಾ ತಂಗಿ ಏನೇ ಆಗಿರಲಿ ಅದೆಲ್ಲ ನಿನಗೇಕೇ? ನಿನಗೆ, ನನ್ನ ಬಗ್ಗೆ ಕಾಮೆಂಟ್ ಮಾಡುವ ರೈಟ್ಸ್ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು. ಯಾರ ಬಳಿಯೂ ಬ್ರದರ್ ಎಂದು ಹೇಳಿಕೊಳ್ಳಬೇಡ. ನಿನಗೆ ಆ ಯೋಗ್ಯತೆ ಇಲ್ಲ ಎಂದು ಬೈದು ಹೊರಟು ಹೋದರು.

ಇದನ್ನೂ ಓದಿ.. Big Boss 8: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಚಂದ್ರಚೂಡ್ ಯಾರು ಗೊತ್ತೇ?
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು