ಮಂಗಳವಾರ, ಏಪ್ರಿಲ್ 20, 2021
32 °C
ಸೀಸನ್‌ -08

Bigg Boss Kannada-8| ಈ ಬಾರಿಯ ಬಿಗ್‌ಬಾಸ್‌ನ ಸ್ಪರ್ಧಿಗಳಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್‌ಬಾಸ್‌ 8ನೇ ಆವೃತ್ತಿಯ ಬಹುನಿರೀಕ್ಷಿತ ಸರಣಿ ಭಾನುವಾರ ಆರಂಭಗೊಂಡಿದೆ. ನಟ ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಬಿಗ್‌ಬಾಸ್‌ ಸರಣಿ ಭರ್ಜರಿಯಾಗಿ ಆರಂಭಗೊಂಡಿದೆ. 

ಬಿಗ್‌ಬಾಸ್‌ ತಂಡ ಈಗಾಗಲೇ ಪ್ರಕಟಿಸಿರುವಂತೆ ಈ ಆವೃತ್ತಿಯಲ್ಲಿ ಸೆಲೆಬ್ರಿಟಿಗಳೇ ಇದ್ದಾರೆ. ನಟಿಯರಾದ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಮಜಾಭಾರತ ಖ್ಯಾತಿಯ ಮಂಜು ಪಾವಗಡ, ಯುಟ್ಯೂಬರ್‌ ಶಮಂತ್‌ ಗೌಡ (ಬ್ರೋ ಗೌಡ), ಬ್ರಹ್ಮಗಂಟು ಧಾರಾವಾಹಿಯ ನಟಿ ಗೀತಾ ಭಾರತಿ ಭಟ್‌, ಹಾಸ್ಯಮಯ ವಿಡಿಯೋ ತುಣುಕುಗಳಿಂದ ಖ್ಯಾತರಾಗಿರುವ ರಾಘು (ರಘು ವೈನ್‌ ಸ್ಟೋರ್‌), ಟಿಕ್‌ಟಾಕ್‌ ನಟಿ ಧನುಶ್ರೀ, ಪುಟ್ಟಗೌರಿ ಮದುವೆಯ ‘ಅಜ್ಜಮ್ಮ’ ಖ್ಯಾತಿಯ ಚಂದ್ರಕಲಾ ಮೋಹನ್‌, ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿದ, ಡ್ರಗ್ಸ್‌ ಪ್ರಕರಣದ ಹಲವು ಸುಳಿವುಗಳನ್ನು ಹೊರಹಾಕಿದ ಪ್ರಶಾಂತ್‌ ಸಂಬರಗಿ, ‘ತಲ್ಲಣ’ ಖ್ಯಾತಿಯ ನಟಿ  ನಿರ್ಮಲಾ ಚನ್ನಪ್ಪ, ಕ್ರಿಕೆಟ್‌ ಲೀಗ್‌ ಪ್ಲೇಯರ್‌ ರಾಜೀವ್‌, ಹಿರಿಯ ನಟ ಶಂಕರ್‌ ಅಶ್ವತ್ಥ್‌ ಭಾಗವಹಿಸಲಿದ್ದಾರೆ. 

ನಟಿ ಶುಭಾ ಪೂಂಜಾ ಪ್ರವೇಶಿಸುವ ವೇಳೆ ಶುಭಾ ಅವರ ಭಾವೀ ಪತಿ ಸುಮಂತ್‌ ಮಹಾಬಲ ಮತ್ತು ತಾಯಿ ಇದ್ದರು. ‘ದಾಲ ವರಿ ಮಲ್ಪೊಡ್ಚಿ’ ಆರಾಮಡ್‌ ಇಪ್ಪುಲೆ  ಎಂದು ಶುಭಾ ಅವರು ತುಳುವಿನಲ್ಲಿ ತಾಯಿಗೆ ಶುಭ ಹಾರೈಸಿದರು. 

ಶಂಕರ್‌ ಅಶ್ವಥ್‌ ಅವರು ಕೂಡಾ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದಾರೆ. ಅವರು ಟ್ಯಾಕ್ಸಿ ಓಡಿಸುವ ದೃಶ್ಯಾವಳಿಗಳು ಮತ್ತು ಜೀವನ ಪರಿಚಯಿಸುವ ವಿಡಿಯೋ ಭಿತ್ತರಗೊಂಡಿದೆ.

***

ನಾನು ಊಬರ್‌ ಚಾಲಕ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಟ್ಯಾಕ್ಸಿ ಹತ್ತಿ ಇಳಿದಾಗ ನಾನು ಯಾರು ಎಂದು ಗೊತ್ತಾದಾಗ ಕಾಲಿಗೆ ನಮಸ್ಕರಿಸಿ ಹೋದವರಿದ್ದಾರೆ. ನನಗಾಗಲೇ ಲಕ್ಷ ರೂಪಾಯಿ ಬಂದಂತಾಯಿತು. 

- ಬಿಗ್‌ಬಾಸ್‌ ವೇದಿಕೆಯಲ್ಲಿ ಭಾವುಕರಾದ ಶಂಕರ್‌ ಅಶ್ವತ್ಥ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು