ಬುಧವಾರ, ಆಗಸ್ಟ್ 4, 2021
26 °C
ಕೊರೊನಾ ಆತಂಕದ ನಡುವೆಯೇ ರಿಯಾಲಿಟಿ ಷೊ ಸಿದ್ಧತೆ 16 ಸೆಲೆಬ್ರಿಟಿಗಳ ಹೆಸರು ಅಂತಿಮ

ಅಕ್ಟೋಬರ್‌ನಿಂದ ಹಿಂದಿ ‘ಬಿಗ್‌ಬಾಸ್‌’ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಆತಂಕದ ನಡುವೆಯೇ ಹಿಂದಿ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಷೊ ‘ಬಿಗ್‌ಬಾಸ್’ ಸೀಸನ್‌ 14 (ಬಿಬಿ–14) ಆರಂಭಕ್ಕೆ ತೆರೆಯ ಮರೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.

ಈ ಬಾರಿಯೂ ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರೇ ಈ ಜನಪ್ರಿಯ ಷೊ ನಡೆಸಿಕೊಡಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಆನ್‌ಲೈನ್‌ ಆಡಿಷನ್ ಮೂಲಕ 30 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಅಕ್ಟೋಬರ್ ಕೊನೆಯ ವಾರದಿಂದ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಹೇಳಲಾಗಿದೆ. ಬಿಗ್‌ಬಾಸ್‌ ತಂಡದಿಂದ ಇದುವರೆಗೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 

ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್‌ಬಾಸ್‌ ಮನೆಗೆ ಹೊಸ ಥೀಮ್‌ ನಿರ್ಧರಿಸಲಾಗಿದೆ. ಮನೆಗೆ ದಟ್ಟ ಅರಣ್ಯದ ಸ್ಪರ್ಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆಯಂತೆ. ಮನೆ ಪ್ರವೇಶಿಸುವ ಮುನ್ನ ಎಲ್ಲ ಸ್ಪರ್ಧಿಗಳಿಗೂ ಕಡ್ಡಾಯವಾಗಿ ಕೋವಿಡ್‌–19 ಪರೀಕ್ಷೆ ನಡೆಸಲಾಗುತ್ತದೆ. ಅದಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಮನೆಯೊಳಗೆ ಎಲ್ಲರೂ ಸಾಮಾಜಿಕ ಅಂತರ ಕಾಪಾಡುವುದು ಕೂಡ ಟಾಸ್ಕ್‌ ಭಾಗವಾಗಲಿದೆ.

ಸಲ್ಮಾನ್‌ ಸಂಭಾವನೆ ಏರಿಕೆ?

‘ಬಿಗ್‌ಬಾಸ್’ 14ನೇ ಆವೃತ್ತಿಯನ್ನೂ ಸಲ್ಮಾನ್‌ ಖಾನ್ ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ಆದರೆ, ಈ ಬಾರಿ ಅವರು ತಮ್ಮ ಸಂಭಾವನೆ ಏರಿಸುವ ಷರತ್ತು ವಿಧಿಸಿದ್ದಾರೆ. ಈ ಬಗ್ಗೆ ಗುಟ್ಟು ಬಿಟ್ಟುಕೊಡಲು ಬಿಗ್‌ಬಾಸ್ ತಂಡ ತಯಾರಿಲ್ಲ.   

ಬಿಗ್‌ಬಾಸ್‌ ಸಂಭಾವ್ಯ ಸ್ಪರ್ಧಿಗಳು 

ಈ ಬಾರಿ ಬಿಗ್‌ಬಾಸ್‌ ಮನೆ ಪ್ರವೇಶಿಸುವ 30 ಸ್ಪರ್ಧಿಗಳಲ್ಲಿ 16 ಸೆಲೆಬ್ರಿಟಿಗಳು ಮತ್ತು ಮೂವರು ಜನಸಾಮಾನ್ಯರಿದ್ದಾರೆ. ಅವರ ಪಟ್ಟಿ ಈಗಾಗಲೇ ಸಿದ್ಧವಾಗಿದೆ ಎಂಬ ಸುಳಿವು ಸಿಕ್ಕಿದೆ. ಹಿಂದಿ ಕಿರುತೆರೆಯ ಪ್ರಸಿದ್ಧ ಧಾರಾವಾಹಿ ‘ನಾಗಿನ್‌ 4’ ನಟಿ ಜಾಸ್ಮಿನ್‌ ಭಾಸಿನ್‌ ಮತ್ತು ಹಾಟ್‌, ಹಾಟ್‌ ಲುಕ್‌ನಿಂದ ಸುದ್ದಿಯಲ್ಲಿರುವ ಅಕಾಂಕ್ಷಾ ಪುರಿ ಅವರ ಹೆಸರು ಶಾರ್ಟ್‌ಲಿಸ್ಟ್‌ನಲ್ಲಿವೆ ಎಂಬ ಸುದ್ದಿ ಹೊರಬಿದ್ದಿದೆ. 

ನಟರಾದ ಸಾಹಿಲ್‌ ಖಾನ್‌, ಕರಣ್‌ ಕುಂದ್ರಾ, ಅಕ್ಷಯ್‌ಕುಮಾರ್‌ ಜತೆ ಸೌಗಂಧ್ ಚಿತ್ರದಲ್ಲಿ ನಟಿಸಿದ್ದ ನಟಿ ಶಾಂತಿಪ್ರಿಯಾ, ‘ಇಷ್ಕ್‌ ಮೇ ಮರ್‌ಜಾವಾ’ ಖ್ಯಾತಿಯ ಅಲಿಶಾ ಪವಾರ್‌, ಎಂಟಿವಿ ರೋಡೀಸ್‌ 8ನೇ ಆವೃತ್ತಿಯ ವಿನ್ನರ್‌ ಆಂಚಲ್ ‌ಖುರಾನಾ, ಎಂಟಿವಿ ‘ಸ್ಲ್ಪಿಟ್ಸ್‌ ವಿಲ್ಲಾ’ ಸ್ಪರ್ಧಿ ಆರುಷಿ ದತ್ತಾ ಮತ್ತು ಕಿರುತೆರೆ ನಟಿ ಮಾನಸಿ ಶ್ರೀವಾಸ್ತವ್ ಹೆಸರು ಹರಿದಾಡುತ್ತಿವೆ. ‌  

(ಮಾಹಿತಿ: ವಿವಿಧ ಮೂಲಗಳಿಂದ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು