ಶನಿವಾರ, ಏಪ್ರಿಲ್ 4, 2020
19 °C

ದೀಪಿಕಾ ಮಾತಿಗೆ ಕರಗಿ ಗಡ್ಡ ತೆಗೆದ ಶೈನ್‌: ಬಿಗ್‌ಬಾಸ್‌ ಮಂದಿ ಆದ್ರು ಶಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ದೀಪಿಕಾ ದಾಸ್‌ ಅವರ ಪ್ರೀತಿಯ ಮಾತುಗಳಿಗೆ ಕರಗಿ ಕೊನೆಗೂ ಗಡ್ಡ ತೆಗೆದು, ಮನೆಮಂದಿಗೆಲ್ಲ ಅಚ್ಚರಿ ನೀಡಿದ್ದಾರೆ ಶೈನ್‌ ಶೆಟ್ಟಿ. ಅಂತೂ ಇಂತು ಬಿಗ್‌ಬಾಸ್‌ ನೀಡಿದ್ದ ಟಾಸ್ಕ್‌ ಯಶಸ್ವಿಯಾಗಿದೆ. 

ಕಿರುತೆರೆಯಲ್ಲಿ ಕೆಲಕಾಲ ಮಿಂಚಿದ ಶೈನ್‌ಶೆಟ್ಟಿ ಹಿರಿತೆರೆಯ ಆಸೆಯಿಂದ ಎಲ್ಲವನ್ನೂ ಕಳೆದುಕೊಂಡ ಎಂಬ ಅವರ ತಾಯಿ ಅಳನ್ನು ಕೇಳಿಸಿಕೊಂಡ ಬಿಗ್‌ಬಾಸ್‌, ಶೈನ್‌ ಶೆಟ್ಟಿ ಮನೆಯಲ್ಲಿ ತುಂಬಾ ಮೆಚ್ಚಿದ್ದ ದೀಪಿಕಾ ದಾಸ್‌ ಅವರಿಗೆ ಸೀಕ್ರೆಟ್‌ ಟಾಸ್ಕ್‌ ನೀಡಿದ್ದರು. ಶೈನ್​ ಶೆಟ್ಟಿಯ ಗಡ್ಡವನ್ನು ಶೇವ್​​ ಮಾಡಿಸಿದರೆ ಮನೆಗೆ ಹೆಚ್ಚವರಿ ಅಂಕವನ್ನು ನೀಡುವುದಾಗಿ ಹೇಳಿದ್ದರು. 

 

ಮೂರು ದಿನದಿಂದ ಗಡ್ಡ ತೆಗೆಯಿರಿ, ನಾನೇ ಟ್ರಿಮ್‌ ಮಾಡುತ್ತೇನೆ ಎಂದೆಲ್ಲ ಮನವೊಲಿಸುತ್ತಿದ್ದ ದೀಪಿಕಾಗೆ ಶೈನ್‌, ಗಡ್ಡ ತೆಗೆದು ಫುಲ್‌ ಶೇವ್‌ ಮಾಡುವ ಮೂಲಕ ಶುಕ್ರವಾರ ಭರ್ಜರಿ ಸರ್ಪ್ರೈಸ್‌ ಅನ್ನೇ ನೀಡಿದ್ದಾರೆ. ಏನೇ ಆದರೂ ಶೈನ್‌ ಶೆಟ್ಟಿಯ ಅವರ ಹೊಸ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ.

ಸಿನಿಮಾಗಾಗಿ ಗಡ್ಡ ಬಿಟ್ಟಿದ್ದೇನೆ, ಇಲ್ಲದಿದ್ದರೆ ತೆಗೆಯುತ್ತಿದ್ದೆ ಎಂದು ಹೇಳುತ್ತಿದ್ದ ಶೈನ್‌ ಕೊನೆಗೂ ಗಡ್ಡ ತೆಗೆದು ಶನಿವಾರಕ್ಕೆ ಸುದೀಪ್‌ ಎದುರು ಕಂಗೊಳಿಸಲು ಸಜ್ಜಾಗಿದ್ದಾರೆ.

ಶೈನ್ ಶೆಟ್ರು ಶೇವ್ ಮಾಡಿದ ಮೇಲೆ ಎಷ್ಟು ಚೆಂದ ಕಾಣ್ತಿದ್ದಾರೆ ಗೊತ್ತಾ? ಶೈನ್ ಅವರ ಯಾವ ಲುಕ್ ನಿಮಗೆ ಇಷ್ಟವಾಗಿದ್ದು? ಕಮೆಂಟ್ ಮಾಡಿ! ಎಂದು ಕಲರ್ಸ್‌ ಕನ್ನಡ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಾಕಿರುವ ವಿಡಿಯೊಗೆ ಶೇವ್‌ ಲುಕ್‌ಯೇ ಚೆಂದ ಎಂದು ಎಲ್ಲರೂ ಕಮೆಂಟ್‌ ಮಾಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು