ಶನಿವಾರ, ಸೆಪ್ಟೆಂಬರ್ 18, 2021
26 °C

Bigg Boss 8: ಈ ಸೀಸನ್‌ನ ಕೊನೆಯ ಎಲಿಮಿನೇಷನ್‌ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕೆ.ಪಿ. ಅರವಿಂದ್, ಮಂಜು ಪಾವಗಡ, ದಿವ್ಯಾ ಉರುಡುಗ, ಚಿತ್ರ: ಕಲರ್ಸ್‌ ಕನ್ನಡ ಫೇಸ್‌ಬುಕ್‌ ಪುಟದಿಂದ

ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಫಿನಾಲೆಯ ಎರಡನೇ ಸಂಚಿಕೆ ಪ್ರಸಾರವಾಗುತ್ತಿದ್ದು, ಈ ಸೀಸನ್‌ನ ಕೊನೆಯ ಎಲಿಮಿನೇಷನ್‌ ಈಗ ನಡೆಯುತ್ತಿದೆ.

ಕೆ.ಪಿ. ಅರವಿಂದ್, ಮಂಜು ಪಾವಗಡ, ದಿವ್ಯಾ ಉರುಡುಗ ಅವರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ‌ ಮನೆಮಾಡಿದೆ. ಈ ಸೀಸನ್‌ನಲ್ಲಿ 17 ಸ್ಪರ್ಧಿಗಳ ಪೈಕಿ ಐವರು ಫಿನಾಲೆ ಹಂತ ತಲುಪಿದ್ದರು. ಶನಿವಾರದ ಸಂಚಿಕೆಯಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಎಲಿಮಿನೇಟ್ ಆದರು. ಪ್ರಶಾಂತ್ ಸಂಬರಗಿಗೆ 6.69 ಲಕ್ಷಕ್ಕೂ ಅಧಿಕ ಮತಗಳು ಬಿದ್ದಿದ್ದರೆ, ವೈಷ್ಣವಿಗೆ 10 ಲಕ್ಷಕ್ಕೂ ಅಧಿಕ ಮತಗಳು ಬಿದ್ದಿದ್ದವು.

ಮೂರನೇ ರನ್ನರ್‌ ಅಪ್‌ ವೈಷ್ಣವಿ ಅವರಿಗೆ ಇಂದಿನ ಸಂಚಿಕೆಯಲ್ಲಿ ₹ 3.5 ಲಕ್ಷ ಬಹುಮಾನ ನೀಡಲಾಯಿತು. ಬಿಗ್ ಬಾಸ್ ಸೀಸನ್ 8ರ ವಿಜೇತ ಸ್ಪರ್ಧಿಗೆ ₹50 ಲಕ್ಷ ಬದಲಿಗೆ ₹ 53 ಲಕ್ಷ ನೀಡಲಾಗುತ್ತಿದೆ. ಹಾಗೆಯೇ, ಮೊದಲ ರನ್ನರ್‌ ಅಪ್‌ಗೆ ₹ 11 ಲಕ್ಷ, ಎರಡನೇ ರನ್ನರ್‌ ಅಪ್‌ಗೆ ₹ 6 ಲಕ್ಷ ಸಿಗಲಿದೆ. ನಾಲ್ಕನೇ ರನ್ನರ್‌ ಅಪ್‌ ಆಗಿರುವ ಪ್ರಶಾಂತ್ ಸಂಬರಗಿಗೆ 2.5 ಲಕ್ಷ ಸಿಕ್ಕಿದೆ.

ಇಂದಿನ ಸಂಚಿಕೆಯಲ್ಲಿ ಈ ಸೀಸನ್‌ನ ನೆನಪುಗಳನ್ನು ಮೆಲುಕು ಹಾಕುವ ವಿಡಿಯೊ ಗಮನ ಸೆಳೆಯಿತು. ರಾಜೇಶ್‌ ಕೃಷ್ಣನ್‌ ಮತ್ತು ರಘು ದೀಕ್ಷಿತ್‌ ಅವರು ಹಾಡುಗಳ ರಸದೌತಣ ನೀಡಿದರು.

ಇದನ್ನೂ ಓದಿ: Bigg Boss 8: ನಿಧಿ ಸುಬ್ಬಯ್ಯಗೆ ಪತ್ರ ಬರೆದು ಕ್ಷಮೆ ಕೇಳಿದ ಅರವಿಂದ್

ಸುದೀಪ್‌ ಕೇಳಿದ ಪ್ರಶ್ನೆಗಳು: ಯೆಸ್‌ ಅಥವಾ ನೋ ಉತ್ತರಗಳು...

* ಅರವಿಂದ್‌ಗಿಂತ ಮುಂಚೆ ಮಂಜು ಪಾವಗಡ ಅವರ ಮದುವೆ ಆಗುತ್ತೆ
* ಹೆಚ್ಚು ಪಾತ್ರೆ ತೊಳೆದವರು ಅರವಿಂದ್‌
* ಕಳೆದುಕೊಂಡಿರುವ ತೂಕವನ್ನು ಶುಭಾಪೂಂಜ ಎರಡು ದಿನಗಳಲ್ಲಿ ಸಂಪಾದಿಸುತ್ತಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು