ಮಂಗಳವಾರ, ಜುಲೈ 27, 2021
27 °C

Bigg Boss 8: ಮತ್ತೆ ಆರಂಭವಾಗುತ್ತಿದೆ ಕನ್ನಡದ ಬಿಗ್ ಬಾಸ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Sudeep Instagram

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಚಿತ್ರೀಕರಣಕ್ಕೆ ನಿರ್ಬಂಧ ಮತ್ತು ಸರ್ಕಾರದ ನಿಯಮಗಳ ಅನ್ವಯ ಸ್ಥಗಿತಗೊಂಡಿದ್ದ ಬಿಗ್ ಬಾಗ್ ಮತ್ತೆ ಆರಂಭವಾಗುತ್ತಿದೆ.

ಎರಡನೇ ಇನಿಂಗ್ಸ್ ಬುಧವಾರ, ಜೂನ್ 23ರಿಂದ ಪ್ರಸಾರವಾಗಲಿದೆ. ಕಿಚ್ಚ ಸುದೀಪ್ ಈ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು ಬ್ರೇಕ್‌ ನಂತರ ಮತ್ತೆ ಶೋಗೆ ಮರಳಲಿದ್ದಾರೆ. ರಿ ಎಂಟ್ರಿಗೆ ಬಿಗ್ ಬಾಸ್ ವೇದಿಕೆ ಸಜ್ಜಾಗಿದೆ, ಇದು ಹೊಸದು ಮತ್ತು ಇದು ಫನ್ ಆಗಿರಲಿದೆ ಎಂದು ಸುದೀಪ್ ಹೇಳಿದ್ದಾರೆ.

ಬಿಗ್ ಬಾಸ್ ಚಿತ್ರೀಕರಣವನ್ನು ಸರ್ಕಾರದ ಮಾರ್ಗಸೂಚಿ ಅನ್ವಯವೇ ನಡೆಸಲಾಗುತ್ತದೆ ಎಂದು ನಿರ್ಮಾಣ ಸಂಸ್ಥೆ ಹೇಳಿದೆ.

ಬಿಗ್ ಬಾಸ್ ಸ್ಪರ್ಧಿಗಳು ಬ್ರೇಕ್ ತೆಗೆದುಕೊಂಡು ಮರಳುತ್ತಿದ್ದು, ಹೊರಗಡೆ ಈ ಬಾರಿಯ ಸ್ಪರ್ಧೆ ಕುರಿತು ಜನರ ಅಭಿಪ್ರಾಯವೇನಿತ್ತು ಎನ್ನುವುದನ್ನು ಕೂಡ ಅರಿತುಕೊಂಡಿರುತ್ತಾರೆ. ಹೀಗಾಗಿ ಎರಡನೇ ಇನಿಂಗ್ಸ್ ಮತ್ತಷ್ಟು ಮಜಾ ಇರಲಿದೆ ಎಂಬ ಮಾತು ಕೇಳಿಬಂದಿದೆ. ಅಲ್ಲದೆ, ಸುದೀಪ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು