ಸೋಮವಾರ, ಮೇ 10, 2021
26 °C

Bigg Boss-8| ಸುದೀಪ್‌ಗೆ ಅನಾರೋಗ್ಯ: ಬೇರೊಬ್ಬ ನಿರೂಪಕರ ಮೂಲಕ ‘ವಾರದ ಕಥೆ'?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ, ಬಿಗ್‌ಬಾಸ್‌ ನಿರೂಪಕರಾದ ಕಿಚ್ಚ ಸುದೀಪ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಈ ವಾರಾಂತ್ಯದಲ್ಲಿ ಬಿಗ್‌ಬಾಸ್‌ ಕಾರ್ಯಕ್ರಮ ನಡೆಸಿಕೊಡಲು ಮನೆಗೆ ಹೊಸ ನಿರೂಪಕರೊಬ್ಬರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕಲರ್ಸ್‌ ಕನ್ನಡ ಚಾನೆಲ್‌ ಮೂಲಗಳು ತಿಳಿಸಿವೆ.

ಬಿಗ್‌ಬಾಸ್‌ 8ನೇ ಆವೃತ್ತಿ 7ನೇ ವಾರಕ್ಕೆ ಕಾಲಿಟ್ಟಿದ್ದು, ಪ್ರತಿ ವಾರಾಂತ್ಯ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್‌ ಸಂಡೇ ವಿದ್‌ ಸುದೀಪ್‌’ ಕಾರ್ಯಕ್ರಮಗಳನ್ನು ಸುದೀಪ್‌ ನಡೆಸಿಕೊಡುತ್ತಿದ್ದರು. ಇದರಲ್ಲಿ ಭಾನುವಾರ ಎಲಿಮಿನೇಷನ್‌ ಪ್ರಕ್ರಿಯೆಯೂ ಇರುತ್ತಿತ್ತು. ಪ್ರತಿ ಶನಿವಾರ ಇಡೀ ದಿನ ಎರಡೂ ದಿನಗಳ ಶೂಟಿಂಗ್‌ ನಡೆಯುತ್ತಿತ್ತು. ಈ ವಾರ, ಸುದೀಪ್‌ ಅವರ ಬದಲಾಗಿ, ಮತ್ತೊಬ್ಬ ನಿರೂಪಕರನ್ನು ಆಹ್ವಾನಿಸಲು ಕಲರ್ಸ್‌ ಕನ್ನಡ ಚಿಂತನೆ ನಡೆಸಿದೆ. ಈ ಕುರಿತು ಚರ್ಚೆ ನಡೆಯುತ್ತಿದೆ. ಹೀಗಾಗಿ ಎಲಿಮಿನೇಷನ್‌ ಇದ್ದೇ ಇರುತ್ತದೆ ಎಂದು ಚಾನೆಲ್‌ ಮೂಲಗಳು ತಿಳಿಸಿವೆ.

ಹೊಸ ನಿರೂಪಕರೊಬ್ಬರನ್ನು ಆಹ್ವಾನಿಸದೇ ಇದ್ದಲ್ಲಿ ಸ್ಪರ್ಧಿಗಳಿಗೆ ಈ ವಾರ ಹೆಚ್ಚಿನ ಆ್ಯಕ್ಟಿವಿಟೀಸ್‌ ನೀಡುವ ಸಾಧ್ಯತೆ ಇದ್ದು, ಮುಂದಿನ ವಾರ ಇಬ್ಬರನ್ನು ಎಲಿಮಿನೇಟ್‌ ಮಾಡುವ ಸಾಧ್ಯತೆ ಇದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಈ ಬಾರಿ ಬಿಗ್‌ಬಾಸ್‌ ಮನೆ ಪ್ರವೇಶಿಸುವ ಮೊದಲೇ ಎಲ್ಲ ಸ್ಪರ್ಧಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್‌ನಲ್ಲಿ ಇರಿಸಿ ಮನೆ ಒಳಗೆ ಕಳುಹಿಸಲಾಗಿತ್ತು. ಸುದೀಪ್‌ ಅವರೂ ಸೇರಿದಂತೆ ಪ್ರತಿ ಬಾರಿ ಬಿಗ್‌ಬಾಸ್‌ ಮನೆ ಒಳಗೆ ಪ್ರವೇಶಿಸುವ ಎಲ್ಲರಿಗೂ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು