ಮಂಗಳವಾರ, ಜುಲೈ 5, 2022
22 °C

ಫೋಟೊಗ್ರಾಫರ್ ವಿರುದ್ಧ ಗರಂ ಆಗಿ ‘ಸಾರಿ‘ ಕೇಳಿಸಿದ ಕರಣ್ ಕುಂದ್ರಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Karan Kundra Instagram Post SC

ಬೆಂಗಳೂರು: ಹಿಂದಿ ಬಿಗ್‌ ಬಾಸ್ 15 ಸರಣಿಯಲ್ಲಿ ಎಲ್ಲರ ಗಮನ ಸೆಳೆದಿದ್ದ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಜೋಡಿ, ಬಳಿಕ ಹಲವು ಕಾರ್ಯಕ್ರಮಗಳಲ್ಲಿ ಕೂಡ ಜತೆಯಾಗಿ ಕಾಣಿಸಿಕೊಂಡಿದ್ದರು.

ತೇಜಸ್ವಿ ಜತೆ ಹೊರಗಡೆ ಹೋಗುವಾಗ ಇವರಿಬ್ಬರನ್ನೂ ಅಭಿಮಾನಿಗಳು ಸುತ್ತುವರಿಯುವುದು, ಫೋಟೊ ತೆಗೆಯುವುದು ಮಾಡುತ್ತಿದ್ದರು.

ಆದರೆ, ಒಂದು ಬಾರಿ ಫೋಟೊಗ್ರಾಫರ್‌ಗಳ ಚೇಷ್ಟೆ ಅತಿಯಾದಾಗ, ಕರಣ್ ಕೋಪಗೊಂಡಿದ್ದು, ಅವರ ವಿರುದ್ಧ ಕೂಗಾಡಿದ್ದಾರೆ.

ಅಲ್ಲದೆ, ಅವರ ಮುಂದೆಯೇ, ತೇಜಸ್ವಿಗೆ ಕರೆ ಮಾಡಿರುವ ಕರಣ್, ಫೋಟೊಗ್ರಾಫರ್‌ಗಳ ಬಳಿ ಕ್ಷಮೆ ಕೇಳಿಸಿದ್ದಾರೆ.

ತೇಜಸ್ವಿ ಅವರಿಗೆ ಕಿರಿಕಿರಿಯಾಗುವ ರೀತಿಯಲ್ಲಿ ಹಲವರು ನಡೆದುಕೊಂಡರು. ಅವರ ಖಾಸಗಿತನಕ್ಕೆ ಧಕ್ಕೆಯಾಗುವಂತೆ ವರ್ತಿಸಿದರು. ಹೀಗಾಗಿ ಅವರನ್ನು ತಡೆದು, ಸಾರಿ ಕೇಳುವಂತೆ ಹೇಳಿದೆ ಎಂದು ಕರಣ್ ಹೇಳಿದ್ದಾರೆ.

ಕೋಪಗೊಂಡು ಕೂಗಾಡುವ ಕರಣ್ ಮತ್ತು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿ ಓಡುವ ತೇಜಸ್ವಿ ಅವರ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು