ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10 | 12 ವಾರಗಳ ಬಳಿಕ ಬಿಗ್‌ ಬಾಸ್ ಪಯಣ ಮುಗಿಸಿದ ಸಿರಿ

Published 1 ಜನವರಿ 2024, 3:02 IST
Last Updated 1 ಜನವರಿ 2024, 3:02 IST
ಅಕ್ಷರ ಗಾತ್ರ

ಬಿಗ್‌ ಬಾಸ್ ಫೈನಲ್‌ಗೆ ಇನ್ನೇನು 27 ದಿನ ಬಾಕಿಯಿದ್ದು, 12ನೇ ವಾರದ ಎಲಿಮಿನೇಷನ್‌ ಸುತ್ತಿನಲ್ಲಿ ನಟಿ ಸಿರಿ ಅವರು ಹೊರ ನಡೆದಿದ್ದಾರೆ.

ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿ ಬಿಗ್‌ ಬಾಸ್ ಪ್ರವೇಶಿಸಿದ್ದ ಸಿರಿ, ತಮ್ಮ ಮೃದು ಸ್ವಭಾವದಿಂದ ಮನೆ ಒಳಗೂ ಮತ್ತು ಹೊರಗೂ ಉತ್ತಮ ಅಭಿಪ್ರಾಯ ಪಡೆದಿದ್ದರು. 11 ವಾರಗಳವರೆಗೂ ಎಲಿಮಿನೇಶನ್‌ನ ಅಂಚಿಗೆ ಬಂದು ಸೇಫ್‌ ಆಗುತ್ತಿದ್ದ ಅವರಿಗೆ 12ನೇ ವಾರ ಅದೃಷ್ಟ ಒಲಿಯಲಿಲ್ಲ.

ಮನೆಯಲ್ಲಿ ಹಿರಿಯಕ್ಕನಂತೆ ಎಲ್ಲ ಸ್ಪರ್ಧಿಗಳ ಜೊತೆ ಬೆರೆಯುತ್ತಿದ್ದ ಸಿರಿ ಅವರ ಎಲಿಮಿನೇಶನ್‌ ಸ್ಪರ್ಧಿಗಳಿಗೆ ಶಾಕ್‌ ನೀಡಿತ್ತು. ಸುದೀಪ್‌ ಅವರು ಸಿರಿ ಅವರ ಹೆಸರು ಹೇಳುತ್ತಿದ್ದಂತೆ ಸಂಗೀತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮನೆಯ ಸದಸ್ಯರೆಲ್ಲರೂ ಸಿರಿಯವರನ್ನು ಆಪ್ತವಾಗಿ ಬೀಳ್ಕೋಟ್ಟಿದ್ದಾರೆ.

12ನೇ ವಾರದ ಎಲಿಮಿನೇಷನ್‌ಗೆ ತುಕಾಲಿ ಸಂತೋಷ್, ವಿನಯ್ ಗೌಡ, ​ಕಾರ್ತಿಕ್ ಮಹೇಶ್​, ತನಿಷಾ, ಸಂಗೀತಾ, ವರ್ತೂರ್ ಸಂತೋಷ್, ಮೈಕಲ್, ಸಿರಿ ಅವರು ನಾಮಿನೇಟ್ ಆಗಿದ್ದರು. ತುಕಾಲಿ ಮತ್ತು ವಿನಯ್‌ ಗೌಡ ಮೊದಲಿಗೆ ಸೇಫ್ ಆಗಿದ್ದರು. ಕೊನೆಯಲ್ಲಿ ಸಿರಿ ಮತ್ತು ಮೈಕಲ್‌ ಉಳಿದಿದ್ದು, ಸಿರಿ ಅವರು ಔಟ್‌ ಆಗಿದ್ದಾರೆ.

ಸಿರಿ ಅವರು ಹೊರನಡೆದ ಬಳಿಕ ಮನೆಯಲ್ಲಿ 9 ಸ್ಪರ್ಧಿಗಳು ಉಳಿದಿದ್ದು, ಸ್ಪರ್ಧೆಯ ಕಿಚ್ಚು ಇನ್ನಷ್ಟು ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT