ಬೆಂಗಳೂರು: ಬಿಗ್ ಬಾಸ್ 11 ಆವೃತ್ತಿಯ ಮೊದಲ ವಾರದ ಟಾಸ್ಕ್‌ಗಳು ಅರಂಭವಾಗಿವೆ. ಸ್ವರ್ಗ ನಿವಾಸಿಗಳು ಮತ್ತು ನರಕ ನಿವಾಸಿಗಳ ನಡುವಿನ ಕಿತ್ತಾಟ ಜೋರಾಗಿದೆ.
ಈ ನಡುವೆ ನಡೆದ ನಾಮಿನೇಷನ್ ಪ್ರಕ್ರಿಯೆ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ.
ನಾಮಿನೇಟ್ ಮಾಡುವ ಸದಸ್ಯರ ಫೊಟೊವನ್ನು ಬೆಂಕಿಗೆ ಹಾಕುವ ಮೂಲಕ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಗೌತಮಿ, ಭವ್ಯ ಗೌಡ ಮೇಲೆ ಹೆಚ್ಚಿನವರು ಆರೋಪ ಮಾಡಿದ್ದಾರೆ.
ಸ್ವರ್ಗದಲ್ಲಿ ಕೆಲಸ ಮಾಡಲು ಚೈತ್ರಾ ಮತ್ತು ಗೋಲ್ಡ್ ಸುರೇಶ್ ಅವರನ್ನು ಸ್ವರ್ಗ ನಿವಾಸಿಗಳು ಆಯ್ಕೆ ಮಾಡಿದ್ದರು. ಇವರಿಬ್ಬರೂ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಲಾಯರ್ ಜಗದೀಶ್ ಅವರು ಸಿಂಕ್, ಶೌಚಾಲಯವನ್ನು ಸ್ವಚ್ಛ ಮಾಡಿದ್ದಾರೆ. ಪರಿಣಾಮ ಬಿಗ್ ಬಾಸ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಸ್ವರ್ಗ ನಿವಾಸಿಗಳು ಲಕ್ಷುರಿ ಪಾಯಿಂಟ್‌ಗಳನ್ನು ಕಳೆದುಕೊಂಡಿದ್ದಾರೆ.
ವಿಗ್ ತೆಗೆದ ಗೌತಮಿ
ಸತ್ಯ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಗೌತಮಿ ಅವರನ್ನು ಎಲ್ಲರೂ ವಿಗ್ ಹಾಕಿದ ರೂಪದಲ್ಲೇ ನೋಡಿದ್ದರು. ಆದರೆ ಬಿಗ್ ಬಾಸ್‌ಗೆ ಬಂದ ಮೊದಲ ದಿನವೇ ತಮ್ಮ ವಿಗ್ ತೆಗೆದು ಹೊಸ ರೂಪದಲ್ಲಿ ಕನ್ನಡಿಗರಿಗೆ ಗೌತಮಿ ಕಾಣಿಸಿಕೊಂಡಿದ್ದಾರೆ.