ಬಿಗ್ಬಾಸ್ ಸ್ಪರ್ಧಿ ಗಿಲ್ಲಿ ನಟನ ಮೇಲೆ ರಿಷಾ ಕೋಪಗೊಂಡು ಕೈ ಮಾಡಿದ್ದಾರೆ. ಇಂದು (ಸೋಮವಾರ) ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಂಚಿಕೆಯಲ್ಲಿ ಗಿಲ್ಲಿ ನಟನಿಗೆ ರಿಷಾ ಹೊಡೆದ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ.

ಜಿಯೋ ಹಾಟ್ಸ್ಟಾರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪ್ರೊಮೋದಲ್ಲಿ, ರಿಷಾ ಸ್ನಾನಕ್ಕೆ ಹೋಗಿರುತ್ತಾರೆ. ಆಗ ಗಿಲ್ಲಿ 'ಬಕೆಟ್ ಕೊಡೋದಿಲ್ವಾ? ಕೊಡಲ್ಲ ಅಂದರೆ ನಿನ್ನ ಕೋಣೆಯಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತೇನೆ’ ಅಂತ ಹೇಳುತ್ತಾರೆ. ಬಳಿಕ ರಿಷಾ ಅವರ ಕೆಲವೊಂದಿಷ್ಟು ಬಟ್ಟೆಗಳನ್ನು ಗಿಲ್ಲಿ ಶೌಚಾಲಯದ ಬಳಿ ತಂದು ಹಾಕುತ್ತಾರೆ. ಇದನ್ನು ನೋಡಿದ ರಿಷಾ ಕೋಪಗೊಂಡು ಕೂಡಲೇ ಗಿಲ್ಲಿ ಅಂತ ಜೋರಾಗಿ ಕಿರುಚುತ್ತಾರೆ. ಬಳಿಕ ಅದನ್ನು ಪ್ರಶ್ನೆ ಮಾಡಲು ಹೋದ ಗಿಲ್ಲಿಯ ಎಡಗೈಗೆ ಹೊಡೆಯುತ್ತಾರೆ. ಮತ್ತೆ, ಮಲಗುವ ಕೋಣೆಗೆ ಹೋಗಿ ಅಲ್ಲಿಯೂ ಕೂಡ ಗಿಲ್ಲಿ ಮೇಲೆ ಕೈ ಮಾಡುತ್ತಾರೆ.
.ಬಿಗ್ಬಾಸ್ ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ.ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್ ಆದ 8 ಸ್ಪರ್ಧಿಗಳಿವರು.
ಬಿಗ್ಬಾಸ್ ನಿಯಮದ ಪ್ರಕಾರ ಮನೆಯಲ್ಲಿ ಯಾವ ಸ್ಪರ್ಧಿ ಕೂಡ ಸಹ ಸ್ಪರ್ಧಿ ಮೇಲೆ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಒಂದು ವೇಳೆ ಸಹ ಸ್ಪರ್ಧಿಗಳ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದರೆ ಅವರನ್ನು ಬಿಗ್ಬಾಸ್ ಮನೆಯಿಂದ ಆಚೆ ಕಳುಹಿಸಲಾಗುತ್ತದೆ. ಈ ಹಿಂದಿನ ಸೀಸನ್ಗಳಲ್ಲೂ ದೈಹಿಕವಾಗಿ ಹಲ್ಲೆ ಮಾಡಿದ್ದಕ್ಕಾಗಿ ಸ್ಪರ್ಧಿಗಳನ್ನು ಬಿಗ್ಬಾಸ್ ಮನೆಯಿಂದ ಆಚೆ ಕಳುಹಿಸಲಾಗಿತ್ತು. ಹೀಗಾಗಿ ಈ ಬಾರಿಯ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ರಿಷಾರನ್ನು ಹೊರ ಹಾಕುತ್ತಾರಾ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.