ಈ ಬಾರಿಯ ಬಿಗ್ಬಾಸ್ 12ನೇ ಆವೃತ್ತಿ ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಿ (Expect The Unexpected) ಎಂಬ ಪರಿಕಲ್ಪನೆಯೊಂದಿಗೆ ಆರಂಭವಾಗಿದೆ. ಈಗ ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ಬಾಸ್ ಅಚ್ಚರಿ ಮೂಡಿಸಿದ್ದಾರೆ. ಪ್ರತೀ ವಾರದಂತೆ ಈ ಬಾರಿಯೂ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಬಿಗ್ಬಾಸ್ ಮನೆಯಲ್ಲಿ ಮೂರನೇ ವಾರವೇ ಒಂದು ಫಿನಾಲೆ ನಡೆಯಲಿದ್ದು, ಅದಕ್ಕೆ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ , ಮಾಳು ನಿಪನಾಳ್ ಮತ್ತು ಸ್ಪಂದನಾ ಸೋಮಣ್ಣ ಈಗಾಗಲೇ ಫೈನಲಿಸ್ಟ್ಗಳಾಗಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ 4 ಮಂದಿ ಫೈನಲಿಸ್ಟ್ಗಳಿಗೆ ಇಮ್ಯೂನಿಟಿ ಕೂಡ ಸಿಕ್ಕಿದೆ. ಹೀಗಾಗಿ ಈ ನಾಲ್ಕು ಮಂದಿ ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ.
.ಮಾತು ಕೊಟ್ಟು ಕೆಟ್ಟವರು: ಬಚಾವ್ ಮಾಡಲು ಹೋಗಿ ಟಾಸ್ಕ್ನಿಂದ ಹೊರಬಿದ್ದ ಅಶ್ವಿನಿ.
13 ಮಂದಿಯನ್ನು ನಾಮಿನೇಟ್ ಮಾಡಿದ ಬಿಗ್ ಬಾಸ್

ಈ ವಾರದ ಬಿಗ್ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಟ್ವಿಸ್ಟ್ ನೀಡಿದ್ದಾರೆ. ನಾಲ್ವರು ಫೈನಲಿಸ್ಟ್ಗಳನ್ನು ಹೊರತುಪಡಿಸಿ, ಉಳಿದ 13 ಸ್ಪರ್ಧಿಗಳನ್ನು ನೇರವಾಗಿ ಬಿಗ್ಬಾಸ್ ನಾಮಿನೇಟ್ ಮಾಡಿದ್ದಾರೆ. ಬಿಗ್ಬಾಸ್ 13 ಮಂದಿ ನಾಮಿನೇಟ್ ಆಗಿದ್ದೀರಿ ಎಂದು ಹೇಳುತ್ತಿದ್ದಂತೆ ಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ. ಹೀಗಾಗಿ ಸ್ಪರ್ಧಿಗಳಲ್ಲಿ ಆತಂಕ ಶುರುವಾಗಿದೆ.

ಇನ್ನು, ಮೂರನೇ ವಾರ ಮಿಡ್ ಸೀಸನ್ ಫಿನಾಲೆಯಲ್ಲಿ ಮಾಸ್ ಎವಿಕ್ಷನ್ ನಡೆಯಲಿದೆ. 13 ಸ್ಪರ್ಧಿಗಳು ನಾಮಿನೇಟ್ ಆಗಿರುವುದರಿಂದ ಇದರಲ್ಲಿ ಎಷ್ಟು ಮಂದಿ ಬಿಗ್ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
.BBK12: ಕೊನೆಗೂ ಜಂಟಿ-ಒಂಟಿಗಳ ಆಟಕ್ಕೆ ಪೂರ್ಣ ವಿರಾಮ ಹೇಳಿದ ಬಿಗ್ಬಾಸ್.ಸ್ಪಂದನಾ ಮಾತಿಗೆ ಸ್ಪಂದಿಸಿದ್ದೇ ತಪ್ಪಾಯ್ತಾ? ವಾರದ ಟಾಸ್ಕ್ಗಳಿಂದ ಧ್ರುವಂತ್ ಔಟ್.
ಮಿಡ್ ಸೀಸನ್ ಫಿನಾಲೆ ಯಾವಾಗ?

ಮಿಡ್ ಸೀಸನ್ ಫಿನಾಲೆ ಅಕ್ಟೋಬರ್ 18 ಮತ್ತು 19ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಗೂ ಜಿಯೊ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ. ಒಟ್ಟು 6 ಗಂಟೆಗಳ ಕಾಲ ಬಿಗ್ಬಾಸ್ ವೀಕ್ಷಕರಿಗೆ ಸಂಭ್ರಮ ನೀಡಲು ತಂಡ ಸಿದ್ಧವಾಗಿದೆ. ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆಯಲ್ಲಿ ಏನೆಲ್ಲಾ ಟ್ವಿಸ್ಟ್ ಇರಲಿದೆ ಎಂದು ಗೊತ್ತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.