ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್ ಬಾಸ್ ಸೀಸನ್ 9: ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

Last Updated 16 ಅಕ್ಟೋಬರ್ 2022, 11:36 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ‘ಬಿಗ್‌ ಬಾಸ್‌ ಸೀಸನ್‌ 9’ರಲ್ಲಿ ‌ಮೊದಲ ಮಹಿಳಾ ಕ್ಯಾಪ್ಟನ್ ಆಗಿ ನಟಿ ದೀಪಿಕಾ ದಾಸ್ ಆಯ್ಕೆಯಾಗಿದ್ದಾರೆ.

ಬಿಗ್‌ ಬಾಸ್‌ ರಿಯಾಲಿಟಿ ಶೋ ಆರಂಭವಾಗಿ ಮೂರು ವಾರಗಳು ಕಳೆದಿವೆ. ಮೊದಲ ವಾರ ವಿನೋದ್ ಗೊಬ್ಬರಗಾಲ ಕ್ಯಾಪ್ಟನ್ ಆಗಿದ್ದರು. ಎರಡನೇ ವಾರ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ ಆಗಿದ್ದರು. ಇದೀಗ ಮೂರನೇ ವಾರ ದೀಪಿಕಾ ದಾಸ್ ಆಯ್ಕೆ ಆಗಿದ್ದಾರೆ.

ಅವಕಾಶ ಸಿಕ್ಕಿದ್ದಕ್ಕೆ ಮನೆಯ ಸದಸ್ಯರಿಗೆ ದೀಪಿಕಾ ಧನ್ಯವಾದ ಹೇಳಿದ್ದಾರೆ. ನಾನು ಕ್ಯಾಪ್ಟನ್ ಆಗುತ್ತೇನೆ ಎಂದು ಕನಸು ಮನಸ್ಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಕ್ಯಾಪ್ಟನ್ ಆಗಬೇಕು ಎನ್ನುವ ಹಠ ನನ್ನಲ್ಲಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ದೀಪಿಕಾಗೆ ತಾಯಿಯ ‘ವಾಯ್ಸ್ ನೋಟ್’
ಈ ಸೀಸನ್‌ನಲ್ಲಿ 3ನೇ ಕ್ಯಾಪ್ಟನ್ ಆಗಿದ್ಯಾ. ಎಲ್ಲರಿಗೂ ಖುಷಿಯಾಗಿದೆ. ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ಆರಾಮಾಗಿ ಆಟವಾಡು. ಎಲ್ಲರ ಜೊತೆಯಲ್ಲೂ ಹೊಂದಿಕೊಂಡು ಹೋಗು. ಜಾಸ್ತಿ ಮಾತನಾಡು. ಚೆನ್ನಾಗಿ ಆಡು’’ ಎಂದು ದೀಪಿಕಾ ದಾಸ್‌ಗೆ ಅವರ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದು ವಿಶೇಷವಾಗಿತ್ತು.

ಈ ವಾರ ಎಲಿಮಿನೇಟ್ ಆದವರು ಯಾರು?
‘ಬಿಗ್ ಬಾಸ್’ ಮನೆಯಿಂದ ಎಲಿಮಿನೇಟ್ ಆಗಲು ಮೂರನೇ ವಾರ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ದರ್ಶ್, ದಿವ್ಯಾ ಉರುಡುಗ, ಮಯೂರಿ, ವಿನೋದ್, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ಅನುಪಮಾ ಗೌಡ ಹಾಗೂ ಅಮೂಲ್ಯ ಗೌಡ ನಾಮಿನೇಟ್ ಆಗಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT