ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ 56ನೇ ದಿನಕ್ಕೆ ಕಾಲಿಟ್ಟಿದೆ. ಈಗ ಮನೆಯಲ್ಲಿ 14 ಸದಸ್ಯರು ಉಳಿದುಕೊಂಡಿದ್ದಾರೆ. ಕಳೆದ ವಾರ ಬಿಗ್ಬಾಸ್ನಿಂದ ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿ ಹೊರಗಡೆ ನಡೆದಿದ್ದರು. ಈ ವಾರ ಬಿಗ್ಬಾಸ್ ಮನೆಯಿಂದ ಹೊರ ಹೋಗಲು 10 ಮಂದಿ ನಾಮಿನೇಟ್ ಆಗಿದ್ದಾರೆ.

ನಾಮಿನೇಟ್ ಆದ ಸ್ಪರ್ಧಿಗಳು ಯಾರು?

ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ಮಾಳು ನಿಪನಾಳ, ರಕ್ಷಿತಾ, ಸ್ಪಂದನಾ ಸೋಮಣ್ಣ, ರಿಷಾ ಗೌಡ, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಅಭಿಷೇಕ್ ಶ್ರೀಕಾಂತ್ ಈ 10 ಮಂದಿ ಈ ವಾರ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಭಾನುವಾರದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ಸ್ಪರ್ಧಿಗಳು ಎಲಿಮಿನೇಷ್ನ ಭಯದಲ್ಲಿದ್ದಾರೆ. ಸದ್ಯ ಈ ವಾರ ಘಟಾನುಘಟಿಗಳು ನಾಮಿನೇಟ್ ಆಗಿದ್ದು, ಯಾರು ಈ ವಾರ ಮನೆಯಿಂದ ಆಚೆ ಬರಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ.
.BBK12: ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮಾತಿನ ಏಟಿಗೆ ಗಿಲ್ಲಿ ತಿರುಗೇಟು.ರಕ್ಷಿತಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ: ನಟ ಸುದೀಪ್ ವಿರುದ್ಧ ದೂರು.
ಈಗಾಗಲೇ ಕಿಚ್ಚ ಸುದೀಪ್ ಅವರು ವಾರದ ಪಂಚಾಯಿತಿ ನಡೆಸಲು ವೇದಿಕೆಗೆ ಬಂದಿದ್ದಾರೆ. ಶನಿವಾರ ಬೆಳ್ಳಂಬೆಳಗ್ಗೆಯ ಪ್ರೋಮೋದಲ್ಲಿ ಅಶ್ವಿನಿ ಗೌಡ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ‘ಏಕವಚನ.. ಏಕವಚನ.. ಏಕವಚನ. ನಿಮಗೆ ಹೋಗಿ, ಬನ್ನಿ ಅಂತ ಕರೆಸಿಕೊಳ್ಳಬೇಕು ಅಂದರೆ ಪ್ರತಿ ಚಿಕ್ಕ ಮಗುವಿಗೂ ಗೌರವ ಕೊಡೋದು ಕಲಿಯಿರಿ. ಇಲ್ಲಿರುವ ಯಾವುದಾದರು ಮಹಿಳಾ ಸದ್ಯಸೆ ನಿಮ್ಮ ಮರ್ಯಾದೆಯನ್ನು ಅಶ್ವಿನಿ ಗೌಡ ಕೈಯಲ್ಲಿ ಕೊಟ್ಟಿದ್ದೀರಾ? ಯಾರು ಇಲ್ಲಿ ಏನನ್ನು ಮಾತನಾಡುತ್ತಿದ್ದಾರೆ? ಅಶ್ವಿನಿ ಅವರೇ ಈ ಮನೆಯಲ್ಲಿ ವುಮನ್ ಕಾರ್ಡ್ ಪ್ಲೇ ಮಾಡಬೇಡಿ’ ಎಂದು ಕಿಚ್ಚ ಸುದೀಪ್ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.