ಕನ್ನಡದ ಬಿಗ್ಬಾಸ್ 12ನೇ ಆವೃತ್ತಿಯಲ್ಲಿ ಅಶ್ವಿನಿ ಗೌಡ ಹಾಗೂ ಅಭಿಷೇಕ್ ಇಬ್ಬರು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಬಿಗ್ಬಾಸ್ ಈ ಇಬ್ಬರಿಗೆ ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾದ ಅಶ್ವಿನಿ ಗೌಡ ಹಾಗೂ ಅಭಿಷೇಕ್ ಮನಸ್ಸಿನಲ್ಲಿ ಸಮಯ ಎಣಿಸಿ 12 ನಿಮಿಷ ಆದ ಬಳಿಕ ಗಂಟೆ ಬಾರಿಸಬೇಕು. ಈ ವೇಳೆ ಅವರ ಲೆಕ್ಕಾಚಾರ ತಪ್ಪಿಸಲು ಮನೆಯ ಸ್ಪರ್ಧಿಗಳು ಅಡ್ಡಿಯುಂಟು ಮಾಡಬಹುದು. 12 ನಿಮಿಷ ಆದಮೇಲೆ ಯಾರು ಬೆಲ್ ಬಾರಿಸುತ್ತಾರೋ ಅವರು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಾರೆ.
.ಊಟ, ನೀರು ಬಿಟ್ಟು ಬಿಗ್ಬಾಸ್ ಮನೆಯಲ್ಲಿ ಉಪವಾಸ ಕುಳಿತ ಅಶ್ವಿನಿ ಗೌಡ: ಕಾರಣವೇನು?.Bigg Boss 12 | ಗಿಲ್ಲಿ ಬಡವ, ಕಷ್ಟಪಟ್ಟಿದ್ದಾನೆ ಅವ್ನು ವಿನ್ ಆದ್ರೆ ಖುಷಿ!.
ಇನ್ನು, ಅಶ್ವಿನಿ ಗೌಡ ಅವರ ದಾರಿ ತಪ್ಪಿಸಲು ಗಿಲ್ಲಿ ನಟ ಮಾತಿನ ಚಾಟಿ ಬೀಸಿದ್ದಾರೆ. ಈ ಮಾತಿನ ಆಟದಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮುಖಾಮುಖಿಯಾಗಿದ್ದಾರೆ.

ಈ ವೇಳೆ ಗಿಲ್ಲಿ ನಟ ‘ರಘು ಅಣ್ಣ ನಿಮ್ಮನ್ನು ಅಶ್ವಿನಿ ಅಂತ ಕರೆಯದೆಯೇ ‘ಅಶು’ ಅಂತ ಕರೆಯಬೇಕಿತ್ತಾ? ಅಶ್ವಿನಿ ಮೇಡಂ. ನಿಮ್ಮ ಇನ್ಶಿಯಲ್ ಏನಾದರೂ ಎ ಅಂತ ಇದ್ರೆ. ಎ ಅಶ್ವಿನಿ ಮೇಡಂ ಅಂತ ಕರೀತಿನಿ. ಬಾಗಿಲ ಹತ್ತಿರ ಬಂದು ನಾನು ಮನೆಗೆ ಹೋಗ್ತೀನಿ ಅಂದ್ರೆ ಹೋಗಿ. ನಾವೇನು ಬೇಡ ಅಂತ ನಿಮ್ಮನ್ನ ಹಿಡಿದುಕೊಂಡಿದ್ದೀವಾ?’ ಅಂತ ಗಿಲ್ಲಿ ನಟ ಅಶ್ವಿನಿ ಗೌಡ ಅವರ ಕಾಲೆಳೆದಿದ್ದಾರೆ. ಅಶ್ವಿನಿ ಗೌಡ ಎಂದು ಹೆಸರು ಕೂಗಿ ಮಾತಿನ ಏಟಿಗೆ ಗಿಲ್ಲಿ ಎದುರೇಟು ಕೊಟ್ಟಿರುವುದನ್ನು ಪ್ರೋಮೊದಲ್ಲಿ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.