ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ 52ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಅಶ್ವಿನಿ ಗೌಡ ಅವರು ಮಂಕಾದಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇತರೆ ಸ್ಪರ್ಧಿಗಳ ಜೊತೆ ಜಗಳ ಮಾಡಿಕೊಳ್ಳುವುದು, ಮನಸ್ತಾಪ ಹಾಗೂ ಅಳುವುದು ಸಾಮಾನ್ಯವಾಗಿದೆ. ಇದೀಗ ಅವರು ಅನ್ನ, ನೀರು ಬಿಟ್ಟು ಬಿಗ್ಬಾಸ್ ಮನೆಯಲ್ಲಿ ಉಪವಾಸ ಕುಳಿತಿದ್ದಾರೆ.
.ಈಗಲೇ ಮನೆಗೆ ಕಳುಹಿಸಿ: ಬಿಗ್ಬಾಸ್ ಮುಖ್ಯದ್ವಾರದ ಮುಂದೆ ಕಣ್ಣೀರಿಟ್ಟ ಅಶ್ವಿನಿ ಗೌಡ.ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಅಶ್ವಿನಿ ಗೌಡ ಆರೋಪಕ್ಕೆ ಸುದೀಪ್ ಗರಂ.
ಸದ್ಯ, ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಶ್ವಿನಿ ಗೌಡ ಅವರು ಬಿಗ್ಬಾಸ್ ಮನೆಯಲ್ಲಿ ಊಟ, ನೀರು ಬಿಟ್ಟು ಉಪವಾಸ ಕುಳಿತಿದ್ದಾರೆ. ಇಷ್ಟು ದಿನ ಗಟ್ಟಿಗಿತ್ತಿಯಂತೆ ಹೋರಾಡುತ್ತಿದ್ದ ಅವರು ಈಗ ಕಣ್ಣೀರು ಹಾಕುತ್ತಿದ್ದಾರೆ. ‘ನನಗೆ ಅವಮಾನ ಆಗಿದೆ. ನನಗೆ ನಾನೇ ನಿಲುವು ತೆಗೆದುಕೊಳ್ಳಬೇಕು’ ಎಂದು ಅಶ್ವಿನಿ ಗೌಡ ಪಟ್ಟು ಹಿಡಿದಿದ್ದಾರೆ.

ಪ್ರೋಮೊದಲ್ಲಿ ಏನಿದೆ?

ಅಶ್ವಿನಿ ಗೌಡ ಅವರು ಮಂಚದ ಮೇಲೆ ಮಲಗಿಕೊಂಡಿದ್ದಾರೆ. ಆಗ ಜಾಹ್ನವಿ ತಟ್ಟೆಯಲ್ಲಿ ಊಟ ಹಾಕಿಕೊಂಡು ಬಂದಿದ್ದಾರೆ. ‘ನೀವು ಮೊದಲು ಊಟ ಮಾಡಿ. ನಿನ್ನೆಯೂ ಮಾಡಿಲ್ಲ. ಈಗಲೂ ತಿಂದಿಲ್ಲ’ ಎಂದು ಒತ್ತಾಯ ಮಾಡಿದ್ದಾರೆ. ನಂತರದ ಅಶ್ವಿನಿ ಗೌಡ ‘ನನಗೆ ಊಟ ಬೇಡ. ತುಂಬಾ ಬೇಸರ ಆಗಿದೆ. ನನ್ನ ವಯಸ್ಸಿಗೆ, ನನ್ನ ಲೇವಲ್ಗೆ, ನನ್ನ ಬುದ್ಧಿವಂತಿಕೆಗೆ ಈ ಥರದ ಅವಮಾನ ಆಗಿದೆ. ನನ್ನ ಸ್ವಾಭಿಮಾನವನ್ನು ಕೊಂದು ತಿನ್ನೋಕೆ ಮನಸ್ಸು ಬರುತ್ತಾ? ನನಗೆ ನಾನೇ ನಿಲುವು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಕಳೆದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಹಾಗೂ ಕ್ಯಾಪ್ಟನ್ ರಘು ಮಧ್ಯೆ ಜೋರು ಗಲಾಟೆ ನಡೆದಿತ್ತು. ಇದೇ ವೇಳೆ ಮಾತಿಗೆ ಮಾತು ಬೆಳೆದು ‘ನನಗೆ ಮನೆಗೆ ಕಳುಹಿಸಿ ಬಿಗ್ಬಾಸ್’ ಎಂದು ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.