‘ನನ್ನನ್ನ ಈಗಲೇ ಮನೆಗೆ ಕಳುಹಿಸಿ ಬಿಗ್ಬಾಸ್’ ಎಂದು ಅಶ್ವಿನಿ ಗೌಡ ಮುಖ್ಯದ್ವಾರದ ಮುಂದೆ ಕಣ್ಣೀರಿಟ್ಟಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಶ್ವಿನಿ ಗೌಡ ಹಾಗೂ ಕ್ಯಾಪ್ಟನ್ ರಘು ಮಧ್ಯೆ ಗಲಾಟೆ ನಡೆದಿದೆ.

ಇದೇ ವೇಳೆ ಅಶ್ವಿನಿ ಗೌಡ ಅವರು ಮನೆಯ ಮುಖ್ಯದ್ವಾರ ತಟ್ಟಿ ಬಿಗ್ಬಾಸ್ ನನ್ನನ್ನ ಆಚೆ ಕಳುಹಿಸಿ ಎಂದು ಕಣ್ಣೀರಿಟ್ಟಿದ್ದಾರೆ. ಇತ್ತೀಚೆಗೆ ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ನಿರಂತರವಾಗಿ ಕಣ್ಣೀರು ಹಾಕುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ಗಿಲ್ಲಿ ಜೊತೆಗೆ ಜಗಳವಾಡಿ ಅತ್ತಿದ್ದರು. ಈಗ ರಘು ಅವರ ಜೊತೆಗೆ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ.
.ನನ್ನ ಹತ್ತಿರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು: ಗಿಲ್ಲಿ ಮೇಲೆ ಅಶ್ವಿನಿ ಗೌಡ ಗರಂ.ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಅಶ್ವಿನಿ ಗೌಡ ಆರೋಪಕ್ಕೆ ಸುದೀಪ್ ಗರಂ.
ಕ್ಯಾಪ್ಟನ್ ರಘು ಅವರು ಅಶ್ವಿನಿ ಗೌಡ ಅವರ ಜೊತೆ ಕೆಲಸ ಮಾಡುವ ವಿಚಾರವಾಗಿ ಮಾತನಾಡಿದ್ದಾರೆ. ‘ನನಗೆ ಬೆನ್ನು ನೋವು ಇದೆ. 10 ನಿಮಿಷ ಬಿಟ್ಟು ಕೆಲಸ ಮಾಡುತ್ತೇನೆ’ ಎಂದು ಅಶ್ವಿನಿ ಹೇಳಿದ್ದಾರೆ. ಆಗ ರಘು, ‘ನೆಟ್ಟಗೆ ಕೆಲಸ ಮಾಡೋದಕ್ಕೆ ಆಗಲ್ಲ, ಮಾತನಾಡೋದು ಮಾತ್ರ ಜಾಸ್ತಿ’ ಎಂದಿದ್ದಾರೆ. ಇದೇ ವಿಚಾರಕ್ಕೆ ಅಶ್ವಿನಿ ಜಗಳಕ್ಕಿಳಿದಿದ್ದಾರೆ. ಬಳಿಕ ಇದರಿಂದ ಮನನೊಂದು ಕಣ್ಣೀರು ಹಾಕುತ್ತಾ ಬಿಗ್ ಬಾಸ್ನಿಂದ ಹೊರ ಹೋಗುತ್ತೇನೆ ಎಂದು ಅಶ್ವಿನಿ ಗೌಡ ಹಠ ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.