ಭಾನುವಾರ, ಮೇ 22, 2022
23 °C

Bigg Boss 8: ಮೇರೆ ಮೀರಿದ ಅರವಿಂದ್– ಪ್ರಶಾಂತ್ ಜಗಳ, ಹೊಡೆದಾಟಕ್ಕೆ ಸಜ್ಜು?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್ ಗದ್ದಲ, ಗಲಾಟೆಗಳಿಂದಲೇ ಸದ್ದು ಮಾಡುತ್ತಿದೆ.

ಚಕ್ರವರ್ತಿ- ಪ್ರಿಯಾಂಕಾ ತಿಮ್ಮೇಶ್ ಕಿತ್ತಾಟದ ಬಳಿಕ ಇದೀಗ, ಚಕ್ರವರ್ತಿ- ಪ್ರಶಾಂತ್, ಪ್ರಶಾಂತ್- ಅರವಿಂದ್ ನಡುವೆ ಬೆಂಕಿ ಹೊತ್ತಿಕೊಂಡಿದೆ.

ನಾಯಕಿ ದಿವ್ಯಾ ಉರುಡುಗ ಟಾಸ್ಕ್ ವೇಳೆ ಕೆ.ಪಿ. ಅರವಿಂದ್ ಅವರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಚರ್ಚೆ ಪ್ರಶಾಂತ್ ಗ್ಯಾಂಗ್‌(ಅವರೇ ಹೇಳಿಕೊಳ್ಳುವ ಹಾಗೆ)ನಲ್ಲಿ ಜೋರಾಗಿದೆ.

ಶಮಂತ್ ಫೌಲ್ ಎಂದ ದಿವ್ಯಾ: ನೋಟ್ ಪ್ರಿಂಟಿಂಗ್ ಟಾಸ್ಕ್ ವೇಳೆ ಬಜರ್ ಆದ ಕೂಡಲೇ ಸದಸ್ಯರು ಏಪ್ರಾನ್ ಧರಿಸಿಕೊಳ್ಳಬೇಕು. ಲಿವಿಂಗ್ ಏರಿಯಾದ ಬಾಗಿಲಿಂದಲೇ ಸ್ಪರ್ಧಿಗಳು ಬರಬೇಕೆಂಬ ನಿಯಮವಿತ್ತು. ಆದರೆ, ಸಮೀಪದ ಶೌಚಾಲಯದಲ್ಲಿದ್ದ ಶಮಂತ್ ಅಲ್ಲಿಂದಲೇ ಬಂದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಾಯಕಿ ದಿವ್ಯಾ ಉರುಡುಗ, ಏಪ್ರಾನ್ ಹಿಂದಿರುಗಿಸುವಂತೆ ಸೂಚಿಸಿದರು. ಆದರೆ, ಇದಕ್ಕೊಪ್ಪದ ಶಮಂತ್ ಮಾತಿನ ಚಕಮಕಿಗೆ ಇಳಿದರು. ನಾನು ಟಾಯ್ಲೆಟ್‌ಗೆ ಹೋಗಿದ್ದೇ ತಪ್ಪಾ? ಎಂದು ಪ್ರಶ್ನೆ ಎತ್ತಿದರು. ಅದು ನಿನ್ನ ರಿಸ್ಕ್, ಆದರೆ, ಬಜರ್ ಆದಾಗ ಬಾಗಿಲ ಬಳಿಯಿಂದಲೇ ಬರಬೇಕೆಂಬ ನಿಯಮವಿದೆ. ಕ್ಯಾಪ್ಟನ್ ಆಗಿ ಹೇಳುತ್ತಿದ್ದೇನೆ. ನೀನು ಪ್ರಿಂಟ್ ಮಾಡುವ ಒಂದೂ ನೋಟ್ ಪರಿಗಣಿಸಲ್ಲ ಎಂದು ದಿವ್ಯಾ ಉರುಡುಗ ಎಚ್ಚರಿಸಿದರು‌.

ಆದರೂ ಕೆಲ‌ಹೊತ್ತು ವಾದ ಮಾಡಿದ ಶಮಂತ್ ಬಳಿಕ ಏಪ್ರಾನ್ ಅನ್ನು ಅರವಿಂದ್ ಅವರಿಗೆ ನೀಡಿ ಹೊರನಡೆದರು. ಅರವಿಂದ್ ಅಲ್ಲಿದ್ದ ಎಂಬ ಕಾರಣಕ್ಕೆ ದಿವ್ಯಾ ಈ ರೀತಿ ಮಾಡಿದಳು. ಒಬ್ಬರ ಸಪೋರ್ಟ್ ಪಡೆದು ಮತ್ತೊಬ್ಬರು ಆಡುತ್ತಿದ್ದಾರೆ ಎಂದು ಗೊಣಗಾಡಿದರು.

ರೊಚ್ಚಿಗೆದ್ದ ಪ್ರಶಾಂತ್: ಇದೇ ಆಟದಲ್ಲಿ ಅರವಿಂದ್ ಅವರು ರಘು ಗೌಡ ಅವರ ಕಟಿಂಗ್ ಮೆಶಿನ್ ಬಳಸಿದ ಬಗ್ಗೆ ಕ್ಯಾತೆ ತೆಗೆದ ಪ್ರಶಾಂತ್ ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡ್ತಿದ್ದೀಯಾ ಎಂದು ಕೂಗಾಡಿದರು. ಇಷ್ಟಕ್ಕೆ ಸುಮ್ಮನಾಗದ ಪ್ರಶಾಂತ್, ಅರವಿಂದ್ ಅವರನ್ನು ಕೆಣಕಿದ್ದು, ನೀನು ಏನ್ ಮಾಡಿದೆ ಗೊತ್ತಾ ಎಂದು ಪ್ರಶ್ನೆ ಎತ್ತಿದ್ದಾರೆ. ಈ ಸಂದರ್ಭ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದಾರೆ.

ಪ್ರಶಾಂತ್- ಅರವಿಂದ್ ಜೋರು ಜಗಳ: 16ನೇ ದಿನ ಪರಸ್ಪರ ಬೈದಾಡಿಕೊಂಡಿದ್ದ ಪ್ರಶಾಂತ್ ಸಂಬರಗಿ ಮತ್ತು ಕೆ.ಪಿ. ಅರವಿಂದ್, ಅದರ ಮುಮದುವರಿದ ಭಾಗವಾಗಿ  17ನೇ (ಜುಲೈ 9ರ ಎಪಿಸೋಡಿನಲ್ಲಿ) ದಿನ ಕೈ ಕೈ ಮಿಲಾಯಿಸಲು‌ ಮುಂದಾಗಿರುವುದು ಇಂದಿನ ಪ್ರೊಮೋದಲ್ಲಿ ಕಂಡುಬಂದಿದೆ.

ನಾಯಕಿಯಾಗಿ ದಿವ್ಯಾ ಉರುಡುಗ ನಿರ್ಧಾರಗಳ ಬಗ್ಗೆ ಆಕ್ಷೇಪ ಎತ್ತಿದ ಪ್ರಶಾಂತ್ ಅವರಿಗೆ ತಿರುಗೇಟು ಕೊಟ್ಟ ಅರವಿಂದ್, ಟಾಸ್ಕ್‌ಗಳಲ್ಲಿ ನಿನ್ನ ತಾಕತ್ತು ತೋರಿಸಿ ಎಂದು ಹೇಳಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಇಬ್ಬರೂ ಪರಸ್ಪರ ಹೊಡೆದಾಟಕ್ಕೆ ಮುಂದಾಗಿದ್ದು, ಮನೆಯ ಇತರೆ ಸ್ಪರ್ಧಿಗಳು ಅವರನ್ನು ತಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು