ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 8: ₹ 2 ಲಕ್ಷ ನಗದು ಗೆಲ್ಲುವ ಅವಕಾಶ ಕೊಟ್ಟ ಬಿಗ್ ಬಾಸ್

Last Updated 2 ಆಗಸ್ಟ್ 2021, 11:50 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 8 ಅಂತಿಮ ವಾರಕ್ಕೆ ಕಾಲಿಟ್ಟಿದೆ. ಉಳಿದಿರುವ ಆರು ಸ್ಪರ್ಧಿಗಳಲ್ಲಿ ಒಬ್ಬರು ವಾರದ ಮಧ್ಯಭಾಗದಲ್ಲಿ ಹೊರಹೋಗಲಿದ್ದಾರೆ.

ಇದರ ಬೆನ್ನಲ್ಲೇ, ಮನೆಯಲ್ಲಿ ಈಡೇರದ ಒಂದು ಆಸೆಯನ್ನು ಪೂರೈಸಲು ಬಿಗ್ ಬಾಸ್ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಸ್ಪರ್ಧಿಗಳಿಗೆ ಫಿನಾಲೆಗೂ ಮುನ್ನ ₹ 2 ಲಕ್ಷ ನಗದು ಗೆಲ್ಲುವ ಅವಕಾಶ ಕೊಟ್ಟಿದ್ದಾರೆ.

ಹೌದು, ಎಲಿಮಿನೇಶನ್ ತೂಗುಗತ್ತಿ ನಡುವೆಯೇ ಅಂತಿಮ ವಾರವನ್ನು ವಿಶೇಷವಾಗಿಸಲು ಬಿಗ್ ಬಾಸ್ ಮುಂದಾಗಿದ್ದು, ಎರಡು ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶ ಕೊಟ್ಟಿದ್ದಾರೆ. ಬಿಗ್ ಬಾಸ್ ಇದಕ್ಕಾಗಿ ಕೆಲ ಟಾಸ್ಕ್‌ಗಳನ್ನು ನೀಡಲಿದ್ದು, ಅತಿ ಹೆಚ್ಚು ಅಂಕ ಪಡೆದ ಸ್ಪರ್ಧಿಗೆ ಬಹುಮಾನ ಸಿಗಲಿದೆ.

ಇನ್ನು, ಮನೆಯಲ್ಲಿ ಈಡೇರದ ಆಸೆಯನ್ನು ಪೂರೈಸುವ ಅಭಯ ಸಹ ಕೊಟ್ಟಿದ್ದಾರೆ. ಅದರಂತೆ ಅರವಿಂದ್, ತಾವು ಎಂಟ್ರಿ ಕೊಟ್ಟ ಬೈಕ್ ಅನ್ನು ಗಾರ್ಡನ್ ಏರಿಯಾದಲ್ಲಿ ನೋಡಬೇಕೆಂದು ಕೇಳಿಕೊಂಡಿದ್ದಾರೆ. ವೈಷ್ಣವಿ ಅವರು ಮನೆಯಿಂದ ವಾಯ್ಸ್ ನೋಟ್ ಬೇಡಿಕೆ ಇಟ್ಟಿರುವುದು ಪ್ರೊಮೊಗಳಲ್ಲಿ ಗೊತ್ತಾಗಿದೆ. ಇತರ ಸ್ಪರ್ಧಿಗಳ ಬೇಡಿಕೆ ಏನೆಂಬುದು ಎಪಿಸೋಡ್‌ನಲ್ಲಿ ಸ್ಪಷ್ಟವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT