ಗುರುವಾರ , ಜೂನ್ 24, 2021
25 °C

Bigg Boss 8: ಆಸ್ಪತ್ರೆಗೆ ದಾಖಲಾದ ದಿವ್ಯಾ ಉರುಡುಗ.. ಅರವಿಂದ್ ಕಣ್ಣೀರು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸದ್ಯ ನೋವಿನ ವಾತಾವರಣ ನಿರ್ಮಾಣವಾಗಿದೆ. ಮನೆಯ ಅಚ್ಚುಮೆಚ್ಚಿನ ಸ್ಪರ್ಧಿ ದಿವ್ಯಾ ಉರುಡುಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ, ಮನೆಯ ಸದಸ್ಯರು ನೋವಿನಲ್ಲಿ ಮುಳುಗಿದ್ದಾರೆ. ಉರುಡುಗ ಅವರಿಗೆ ಅತ್ಯಂತ ಆತ್ಮೀಯರಾಗಿದ್ದ ಅರವಿಂದ್ ಕಣ್ಣೀರು ಹಾಕಿದ್ದಾರೆ.

ಕ್ಯಾಪ್ಟೆನ್ಸಿ ಕಂಟೆಸ್ಟೆಂಟ್ ಟಾಸ್ಕ್‌ಗಳಲ್ಲಿ ಮುಳುಗಿದ್ದ ಮನೆಯ ಸದಸ್ಯರಿಗೆ ಬಿಗ್ ಬಾಸ್ ಕಡೆಯಿಂದ ಒಂದು ಸಂದೇಶ ಬಂದಿತ್ತು. ದಿವ್ಯಾ ಉರುಡುಗ ಅವರ ಬಟ್ಟೆಗಳನ್ನು ತಂದು ಸ್ಟೋರ್ ರೂಮಿನಲ್ಲಿ ಇಡಲು ಬಿಗ್ ಬಾಸ್ ಆದೇಶಿಸಿದರು. ಅರವಿಂದ್ ಕೂಡಲೇ ಬಟ್ಟೆಗಳನ್ನು ತಂದು ಇಡಲು ಹೊರಟರು. ಆದರೆ, ಅಷ್ಟೊತ್ತಿಗೆ ಮನೆಯ ಸದಸ್ಯರಲ್ಲಿ ದುಗುಡ ಆರಂಭವಾಗಿತ್ತು. ವೈದ್ಯರ ಭೇಟಿಗೆ ತೆರಳಿದ್ದ ಉರುಡುಗ ಅವರಿಗೆ ಏನಾಯಿತೋ ಏನೋ ಎಂಬ ಆತಂಕ ಆವರಿಸಿತು. ಅರವಿಂದ್ ಕಣ್ಣಲ್ಲಿ ಕಣ್ಣೀರು ಬರಲಾರಂಭಿಸಿತ್ತು.

ಆಸ್ಪತ್ರೆಗೆ ದಾಖಲು: ಕಳೆದ ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿವ್ಯಾ ಉರುಡುಗ ಟಾಸ್ಕ್‌ಗಳಿಂದ ದೂರ ಉಳಿದಿದ್ದರು. ಈ ಮಧ್ಯೆ ಸಂದೇಶ ಕಳುಹಿಸಿದ್ದ ಸುದೀಪ್ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದ್ದರು. ಇನ್ನೇನು ಚೇತರಿಸಿಕೊಂಡರು ಎನ್ನುವಷ್ಟರಲ್ಲಿ ಮತ್ತೆ ಆರೋಗ್ಯ ಹದಗೆಟ್ಟಿದೆ. ಕನ್ಫೆಶನ್ ರೂಮಿಗೆ ತೆರಳಿದ ದಿವ್ಯಾ ಉರುಡುಗ ಅವರನ್ನು ವೈದ್ಯರ ಪರೀಕ್ಷೆ ಬಳಿಕ ಸ್ಕ್ಯಾನಿಂಗ್‌ ಮಾಡಿಸಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮನೆಯ ಸದಸ್ಯರಿಗೆ ಮಾಹಿತಿ ನೀಡಿರುವ ಬಿಗ್ ಬಾಸ್, ಉರುಡುಗ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ.. Bigg Boss 8: ಜಾಸ್ತಿಯಾದರೆ ಎರಡು ತಟ್ಟಬೇಕು ಅನಿಸುತ್ತೆ: ಕಿಚ್ಚನ ಕಿಡಿ

‘ಅಕ್ಕ ಎನ್ನುತ್ತಿದ್ದವಳಿಗೆ ಹೀಗಾಯಿತೇ’: ಈ ಮನೆಯಲ್ಲಿ ನನ್ನನ್ನು ಅಕ್ಕ ಎನ್ನುತ್ತಿದ್ದ ದಿವ್ಯಾ ಉರುಡುಗ ಅವರಿಗೆ ಹೀಗಾಯಿತೇ ಎಂದು ನಟಿ ಶುಭಾ ಪೂಂಜಾ ದುಃಖ ತಡೆಲಾರದೇ ಅತ್ತುಬಿಟ್ಟರು. ದುಃಖ ಉಮ್ಮಳಿಸಿ ಬರುತ್ತಿದ್ದರಿಂದ ಮಾತು ಬಾರದೆ ಅರವಿಂದ್ ಕಣ್ಣೀರು ಸುರಿಸಿದರು. ಮನೆಯ ಸದಸ್ಯರೆಲ್ಲ ಒಂದೆಡೆ ಸೇರಿ ಅರವಿಂದ್ ಅವರಿಗೆ ಸಾಂತ್ವನ ಹೇಳಿದರು. ದಿವ್ಯಾ ಉರುಡುಗ ಹುಷಾರಾಗಿ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಧೈರ್ಯ ತುಂಬಿದರು. ಇತ್ತ, ಶಮಂತ್ ಮನೆಯ ದೇವರ ಕೋಣೆ ಬಳಿ ತೆರಳಿ ತಾಯಿ ಶಾರದೆಗೆ ಪ್ರಾರ್ಥನೆ ಸಲ್ಲಿಸಿದರು.

 
 
 
 

 
 
 
 
 
 
 
 
 
 
 

A post shared by Colors Kannada Official (@colorskannadaofficial)

ಉರುಡುಗಗೆ ಖುಷಿ ನೀಡಲು ಶಮಂತ್ ಹಾಡು: ಆಸ್ಪತ್ರೆಯಲ್ಲಿರುವ ದಿವ್ಯಾ ಉರುಡುಗ ಅವರಿಗೆ ಖುಷಿ ನೀಡಲು ಶಮಂತ್ ಒಂದು ಹಾಡನ್ನು ಬರೆದು ಕ್ಯಾಮೆರಾ ಮುಂದೆ ತೆರಳಿ ಹಾಡಿದ್ದಾರೆ. ದಿವ್ಯಾ ಬೇಗ ಬಾ.. ಅರವಿಂದ್ ನಿಮಗಾಗಿ ಕಾಯುತ್ತಿದ್ದಾನೆ ಎಂಬ ಸಾಲುಗಳು ಅದರಲ್ಲಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು