ರಕ್ಷಿತಾಗೆ ಮಾತ್ರ ಪತ್ರ ಸಿಗಬಾರದು ಎಂದು ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಧ್ರುವಂತ್ ಹಠ ಹಿಡಿದಿದ್ದಾರೆ. ಈ ವಾರ ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ್ ನೀಡಿಲ್ಲ. ಒಂದೊಂದಾಗಿ ಸ್ಪರ್ಧಿಗಳಿಗೆ ಕುಟುಂಬಸ್ಥರಿಂದ ಪತ್ರಗಳು ಬರುತ್ತಿವೆ. ಮನೆಯವರ ಪತ್ರಗಳನ್ನು ಓದಲು ಸ್ಪರ್ಧಿಗಳು ಕಾಯುತ್ತಿದ್ದಾರೆ. ಆದರೆ ಮನೆಯವರಿಂದ ಬಂದ ಪತ್ರಗಳನ್ನು ಪಡೆಯಲು ಸ್ಪರ್ಧಿಗಳಿಗೆ ಬಿಗ್ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ.

ತಮ್ಮ ಪತ್ರ ಪಡೆಯಬೇಕೆಂದರೆ ಸಹ ಸ್ಪರ್ಧಿಗಳಿಗೆ ಬಂದ ಲೆಟರ್ ಅನ್ನು ಹರಿದು ಹಾಕಬೇಕು ಎಂದು ಬಿಗ್ಬಾಸ್ ಘೋಷಿಸಿದ್ದರು. ಹೀಗಾಗಿ ಸ್ಪರ್ಧಿಗಳ ಮಧ್ಯೆಯೇ ಬಿಗ್ಬಾಸ್ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿದೆ. ಈಗ ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಅವರ ಮನೆಯಿಂದ ಬಂದ ಪತ್ರಗಳನ್ನು ಪಡೆಯಲು ಮನೆಯವರು ಒಮ್ಮತದಿಂದ ಒಬ್ಬರ ಹೆಸರನ್ನು ತೆಗೆದುಕೊಳ್ಳಬೇಕೆಂದು ಸೂಚಿಸುತ್ತಾರೆ.
.BBK12| ಗಿಲ್ಲಿ ಬಳಿಕ ಸೂರಜ್ ಜೊತೆ ಜಗಳಕ್ಕಿಳಿದ ರಿಷಾ: ಇಬ್ಬರ ನಡುವೆ ಆಗಿದ್ದೇನು?.ಮತ್ತೆ ರಕ್ಷಿತಾ ಜೊತೆ ಜಗಳಕ್ಕಿಳಿದ ಅಶ್ವಿನಿ ಗೌಡ, ರಾಶಿಕಾ: ಏನಿದು ಕಿಚನ್ ಕದನ?.
ಹಲವರು ರಕ್ಷಿತಾಗೆ ಪತ್ರ ಸಿಗಬೇಕು ಎನ್ನುತ್ತಾರೆ. ಆದರೆ, ಅಶ್ವಿನಿ ಗೌಡ ಮತ್ತು ಧ್ರುವಂತ್ ಮಾತ್ರ ರಕ್ಷಿತಾಗೆ ಪತ್ರ ಸಿಗಬಾರದು ಎಂದು ಹಠ ಹಿಡಿದಿದ್ದಾರೆ. ಅಶ್ವಿನಿ ಗೌಡ, ಧ್ರುವಂತ್ ಅವರ ಮಾತು ಕೇಳಿ ರಕ್ಷಿತಾ ಕಣ್ಣೀರಿಟ್ಟಿದ್ದಾಳೆ. ಅಲ್ಲದೇ ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಪತ್ರ ಯಾರ ಕೈಗೆ ಸೇರಲಿದೆ ಎಂದು ಗೊತ್ತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.