ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Bigg Boss 8: ಅರವಿಂದ್ ನನಗೆ ಸ್ಫೂರ್ತಿ ಎಂದ ಮಂಜು.. ಹೀಗಿತ್ತು ಆ ಗೆಲುವಿನ ಕ್ಷಣ

Last Updated 9 ಆಗಸ್ಟ್ 2021, 7:22 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ ಕನ್ನಡ ವಿನ್ನರ್ ಮಂಜು ಪಾವಗಡ ಅವರು ನನ್ನ ಈ ಗೆಲುವಿಗೆ ಸ್ಪೂರ್ತಿ ಆಗಿದ್ದು ರನ್ನರ್ ಅಪ್ ಕೆ.ಪಿ. ಅರವಿಂದ್ ಎಂದು ಹೇಳಿದ್ದಾರೆ.

ಫಿನಾಲೆಯಲ್ಲಿ ಸುದೀಪ್ ಅವರ ಬಲಕ್ಕೆ ಮಂಜು ಪಾವಗಡ ಮತ್ತು ಎಡಕ್ಕೆ ಅರವಿಂದ್ ಕೆ.ಪಿ ನಿಂತಿದ್ದರು. ಬಿಗ್ ಬಾಸ್ ಸೀಸನ್ 8 ಕೊನೆಗೊಳ್ಳುತ್ತಿದೆ ಎಂದು ವಿವರಣೆ ಕೊಟ್ಟ ಕಿಚ್ಚ, ವಿನ್ನರ್ ಈಸ್ ಮಂಜು ಪಾವಗಡ ಎಂದು ಘೋಷಿಸಿದರು. ವೇದಿಕ ಮುಂಭಾಗ ಕುಳಿತಿದ್ದ ಮಾಜಿ ಸ್ಪರ್ಧಿಗಳು, ಮಂಜು ಕುಟುಂಬ ಸದಸ್ಯರು ಎಲ್ಲರಲ್ಲೂ ಸಂತಸ ಮನೆ ಮಾಡಿತ್ತು. ಸ್ವತಃ ಮಂಜು ಪಾವಗಡ ಒಂದು ಕ್ಷಣ ಸುಮ್ಮನೆ ನಿಂತುಬಿಟ್ಟರು. ಎಲೆಕ್ಟ್ರಿಕ್ ಫ್ಲವರ್ ಪಾಟ್‌ಗಳ ಅಬ್ಬರದ ಮೇಲೆ ವೇದಿಕೆ ನಳನಳಿಸುತ್ತಿತ್ತು.

'ಅರವಿಂದನೇ ನನಗೆ ಸ್ಫೂರ್ತಿ': ಗೆಲುವಿನ ಬಳಿಕ ಮೈಕ್ ಪಡೆದುಕೊಂಡ ಮಂಜು ಅವರ ಬಾಯಲ್ಲಿ ಮಾತೆ ಹೊರಡಲಿಲ್ಲ. ನನಗೆ ಬೆಂಬಲ ಕೊಟ್ಟ ಎಲ್ಲ 19 ಸ್ಪರ್ಧಿಗಳು, ಲಕ್ಷ ಲಕ್ಷ ಮತ ಹಾಕಿದ ಜನರಿಗೆ ಧನ್ಯವಾದ ಹೇಳಿದರು. ಇದೇವೇಳೆ, ನನ್ನ ಗೆಲುವಿಗೆ ಸ್ಫೂರ್ತಿಯಾದವರಲ್ಲಿ ಅರವಿಂದ್ ಕೂಡಒಬ್ಬರು. ನಾನು ಎಂಟರ್‌ಟೈನರ್, ಟಾಸ್ಕ್‌ನಲ್ಲಿ ನಾನು ಅಷ್ಟಾಗಿ ಚುರುಕಿಲ್ಲ. ಅರವಿಂದ್ ಆಡುತ್ತಿದ್ದ ರೀತಿ. ನಿಲ್ಲುತ್ತಿದ್ದ ಶೈಲಿ ನನಗೆ ಸ್ಫೂರ್ತಿ ನೀಡಿತ್ತು. ಅವನಂತೆಯೇ ಆಡಬೇಕು ಎಂದುಕೊಂಡಿದ್ದೆ. ಮೊದಲ ದಿನವೇ ಅರವಿಂದ್ ಮತ್ತು ರಾಜೀವಣ್ಣ ನನ್ನ ಪ್ರತಿಸ್ಪರ್ಧಿಗಳು ಎಂದು ಫಿಕ್ಸ್ ಆಗಿದ್ದೆ ಎಂದು ಮಂಜು ಪಾವಗಡ ಹೇಳಿದ್ದಾರೆ.

ಅಷ್ಟೇ ಅಲ್ಲ, ‘ಥ್ಯಾಂಕ್ಸ್ ಮಗಾ‘ ಎಂದು ಅರವಿಂದ್ ಅವರನ್ನು ತಬ್ಬಿ ಧನ್ಯವಾದ ಅರ್ಪಿಸಿದ್ದಾರೆ.

ಇದೇವೇಳೆ, ತನಗೆ ಜೀವನ ನೀಡಿದ ಮಜಾಭಾರತ ತಂಡಕ್ಕೆ ತಮ್ಮ ಬಿಗ್‌ ಬಾಸ್ ಗೆಲುವನ್ನು ಮಂಜು ಪಾವಗಡ ಅರ್ಪಿಸಿದ್ದಾರೆ. ಇಲ್ಲಿಗೆ ಬರುವ ಮುನ್ನ, ಬಿಗ್ ಬಾಸ್ ಬಹು ದೊಡ್ಡ ವೇದಿಕೆ. ನೀನು ಜೊತೆ ಜೊತೆ ಫಿನಾಲೆಯಲ್ಲಿ ನಿಲ್ಲುವ ಇಬ್ಬರಲ್ಲಿ ಒಬ್ಬನಾಗಿರಬೇಕೆಂದು ಮಜಾಭಾರತ ಪ್ರೊಡ್ಯೂಸರ್ ಹೇಳಿದ್ದರು. ಜಯಶಾಲಿಯಾಗಿ ಬಂದಿದ್ದೇನೆ ನೋಡಿ ಸರ್ ಎಂದು ಸಂತಸದಿಂದ ಹೇಳಿದರು.

ಇವುಗಳನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT