ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ ಬಾಸ್‌ ಆರನೇ ಆವೃತ್ತಿ: ಪ್ರೋಮೋ ಶೂಟ್‌ನಲ್ಲಿ ಕಿಚ್ಚ ಸುದೀಪ್‌ ಹೊಸ ಗೆಟಪ್‌

Last Updated 26 ಆಗಸ್ಟ್ 2018, 15:17 IST
ಅಕ್ಷರ ಗಾತ್ರ

ಬೆಂಗಳೂರು: ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಬಿಗ್ ಬಾಸ್’ರಿಯಾಲಿಟಿ ಷೋನ ಆರನೇ ಆವೃತ್ತಿಯದಿನಾಂಕಈಗಾಗಲೇ ನಿಗದಿಯಾಗಿದೆ. ಸೆಪ್ಟಂಬರ್ ತಿಂಗಳಾಂತ್ಯಕ್ಕೆ ಷೋ ಆರಂಭವಾಗಲಿದೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಈಗ ಪ್ರೋಮೋ ಶೂಟ್ ಮಾಡಲು ತಯಾರಿ ನಡೆದಿದೆ.

ಭಾನುವಾರ ನಡೆದ ಪ್ರೋಮೋ ಶೂಟ್‌ನಲ್ಲಿ ಕಿಚ್ಚ ಸುದೀಪ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೋಮೋ ಶೂಟ್ ಚಿತ್ರೀಕರಣದವಿಡಿಯೊವನ್ನು ಕಲರ್ಸ್‌ ವಾಹಿನಿ ಫೇಸ್‌ಬುಕ್‌ ಲೈವ್‌ಮಾಡಿದೆ.

ಈಗಾಗಲೇ 39 ಸಾವಿರಕ್ಕೂ ಹೆಚ್ಚು ಜನ ಲೈವ್‌ ವಿಡಿಯೊ ನೋಡಿದ್ದಾರೆ. ಸಾವಿರಾರು ಜನರು ಫೇಸ್‌ಬುಕ್‌ನಲ್ಲಿ ವಿಡಿಯೊ ಹಂಚಿಕೊಂಡು, ತಮ್ಮಿಷ್ಟದ ಕಾರ್ಯಕ್ರಮ ನೋಡಲು ಎದುರು ನೋಡುತ್ತಿರುವುದಾಗಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಯಾರೆಲ್ಲಾಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಡಿಯೊದಲ್ಲಿ ಏನಿದೆ: ‘ಮೆಸೆಜ್‌ಗೆ ಫೋನು, ಸೋಶಿಯಲ್‌ ಮೀಡಿಯಾಗೂ ಫೋನು, ಫೋಟೊ ತೆಗೆಯೋಕೂಫೋನು, ಬ್ಯಾಂಕಿಂಗ್‌ ಕೆಲಸಕ್ಕೂ ಫೋನು ಇಡೀ ಲೈಫ್‌ಗೆ ಫೋನ್‌ ಬೇಕಾಗಿರುವಾಗ ಲೈಫ್‌ನ ಆಟ ‘ಬಿಗ್‌ ಬಾಸ್‌’ ಫೋನ್‌ನಲ್ಲಿ ಇಲ್ಲ ಅಂದರೇ ಹೇಗೆ? ವೂಟ್‌ ಆ್ಯಪ್‌ (voot app) ಈಗಾಲೇ ಡೌನ್‌ಲೋಡ್‌ ಮಾಡಿಕೊಳ್ಳಿ ಬಿಗ್‌ ಬಾಸ್‌ ನೋಡಿ’ ಎಂದು ಸುದೀಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT